ಕಣಿವೆ, ಏ. ೨೭: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ. ಬ್ರಿಜೇಶ್ ನಿರಂಜನ್ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದು, ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡದಲ್ಲಿ ೧೦೦ಕ್ಕೆ ೯೮, ಇಂಗ್ಲೀಷ್ ೯೭, ಭೌತಶಾಸ್ತç ೯೯, ರಸಾಯನಶಾಸ್ತç ೯೭, ಗಣಿತ ೧೦೦, ಜೀವಶಾಸ್ತçದಲ್ಲಿ ೧೦೦ ಅಂಕಗಳು ಸೇರಿ ೬೦೦ ಅಂಕಗಳಿಗೆ ೫೯೧ ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗ ಮತ್ತು ರಾಜ್ಯಕ್ಕೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಕುಶಾಲನಗರದ ಕುದುಪಜೆ ನಿರಂಜನ್ ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಸುಮತಿ ದಂಪತಿ ಪುತ್ರ.

ಈ ಸಂದರ್ಭ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ, ಪಿಯು ವಿಭಾಗದ ಪ್ರಾಂಶುಪಾಲೆ ಕ್ಲಾರಾ ರೇಶ್ಮಾ, ಮಹಾತ್ಮ ಗಾಂಧಿ ಪದವಿ ವಿಭಾಗದ ಪ್ರಾಂಶುಪಾಲೆ ಲಿಖಿತ, ಮಂಗಳೂರಿನ ರಸಾಯನ ಶಾಸ್ತçದ ಪ್ರೊ. ಡಾ. ರಾಕೇಶ್, ಕಾಲೇಜು ಟ್ರಸ್ಟಿ ನಂಜಪ್ಪ ಹಾಗೂ ಉಪನ್ಯಾಸಕರಿದ್ದರು.