ಸುಳ್ಯ, ಏ. ೨೭: ೨೦೨೨-೨೩ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದÀ ವಿದ್ಯಾರ್ಥಿನಿಯರಿಗೆ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಆದ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ತಲಾ ರೂ. ೨೫,೦೦೦ ದಂತೆ ಪ್ರೋತ್ಸಾಹಧನ ಘೋಷಿಸಿದರು.
ಅಕಾಡೆಮಿಯ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದಲ್ಲಿ ೫೮೧ ಅಂಕದೊAದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ಕೆ.ಸಿ. ಅವರಿಗೆ ರೂ. ೨೫೦೦೦ವನ್ನು ನೀಡಿ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಶಾಲು ಹೊದಿಸಿ ಸನ್ಮಾನಿಸಿದರು. ಅವರು ಕೆ.ವಿ.ಜಿ. ದಂತ ಮಹಾವಿದ್ಯಾಲಯ ಸುಳ್ಯ ಅಥವಾ ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದಲ್ಲಿ ಅವರಿಗೆ ಬೋಧನಾ ಶುಲ್ಕದಲ್ಲಿ ಶೇ. ೫೦ ರಿಯಾಯಿತಿಯನ್ನು ಘೋಷಿಸಿದರು.
ಈಕೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಕುದ್ಕುಳಿ ಅಜ್ಜಿಕಲ್ಲು ಮನೆ ಚೆನ್ನಕೇಶವ ಮತ್ತು ಹೇಮಾವತಿ ದಂಪತಿ ಪುತ್ರಿ. ಈ ಸಂದರ್ಭ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ.ಆರ್., ಅಕಾಡೆಮಿ ಕಚೇರಿಯ ಅಧೀಕ್ಷಕ ಪ್ರಸನ್ನ ಕಲ್ಲಾಜೆ, ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.