ಮಡಿಕೇರಿ, ಏ. ೨೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ೧೦ ಕುಟುಂಬ ೧೮ ಗೋತ್ರದ ಗೌಡ ಕ್ರಿಕೆಟ್ ಇತಿಹಾಸದಲ್ಲಿ ಲೆದರ್ ಬಾಲ್ ಟಿ-೧೦ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಗೌಡ ಜನಾಂಗದ ಯುವ ಪೀಳಿಗೆಯನ್ನು ಸಾಫ್ಟ್ ಬಾಲ್ ಕ್ರಿಕೆಟ್‌ನಿಂದ ಪ್ರೊಫೆಷನಲ್ ಕ್ರಿಕೆಟ್‌ನತ್ತ ಕರೆದುಕೊಂಡು ಹೋಗುವುದೇ ಇದರ ಮುಖ್ಯ ಗುರಿಯಾಗಿದೆ. ಕ್ರಿಕೆಟ್ ನಮ್ಮ ದೇಶದ ಜನರಲ್ಲಿ ಮಾನಸಿಕವಾಗಿ ಬೆರೆತು ಹೋಗಿರುವ ಬಹುಮುಖ್ಯ ಕ್ರೀಡೆಯಾಗಿದ್ದು, ಗ್ರಾಮ ಮತ್ತು ಕುಟುಂಬಗಳಿAದ ಪ್ರತಿಭಾವಂತ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತಂದು ಅವರನ್ನು ಮುಂದಿನ ಹಂತಕ್ಕೆ ಪ್ರೋತ್ಸಾಹಿಸಿ ಮತ್ತು ವೃತ್ತಿಪರ
(ಮೊದಲ ಪುಟದಿಂದ) ಕ್ರಿಕೆಟ್‌ನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಎಲ್ಲಾ ರೀತಿಯ ನೆರವು ನೀಡುವ ಸಲುವಾಗಿ ಕೊಡಗು ಗೌಡ ಯುವ ವೇದಿಕೆ ಲೆದರ್ ಬಾಲ್ ಲೀಗ್‌ನ ಮೂಲಕ ಪ್ರೊಫೆಷನಲ್ ಕ್ರಿಕೆಟ್‌ನತ್ತ ತನ್ನ ಪ್ರಥಮ ಹೆಜ್ಜೆಯನ್ನು ಇಡುತ್ತಿದೆ. ಮುಂದಿನ ದಿನಗಳಲ್ಲಿ ಲೆದರ್ ಬಾಲ್ ಕ್ರಿಕೆಟನ್ನು ಹೋಬಳಿ, ಗ್ರಾಮ ಮತ್ತು ಕುಟುಂಬವಾರು ನಡೆಸುವ ಆಲೋಚನೆಯನ್ನು ಹೊಂದಿರುವದಾಗಿ ಹೇಳಿದರು.
ಲೆದರ್ ಬಾಲ್ ಕ್ರಿಕೆಟ್ ಮೇ ೧೬ ರಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ತಂಡಗಳ ಆಯ್ಕೆಗೆ ೧೦ ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗುವುದು. ಈಗಾಗಲೇ ಹಲವು ಮಾಲೀಕರು ಒಲವು ತೋರಿದ್ದು, ಆಸಕ್ತ ಮಾಲೀಕರು ಫ್ರಾಂಚೈಸಿಗಳನ್ನು ಖರೀದಿ ಮಾಡ ಬಹುದಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ೧೦ ಕುಟುಂಬ ೧೮ ಗೋತ್ರದ ಗೌಡ ಜನಾಂಗದ ಅರ್ಹ ಆಟಗಾರರು ತಾ. ೨೬ರ ಸಂಜೆಯಿAದ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಆಟಗಾರರ ಅರ್ಜಿಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನಮೂದಿಸಬಹುದಾಗಿದೆ. ಅರ್ಜಿ ನೊಂದಾಯಿಸಲು ಮೇ ೭ನೇ ತಾರೀಕು ಮಧ್ಯಾಹ್ನ ೨ ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹು ದಾಗಿದೆ, ಅರ್ಜಿ ಹಾಕಲು ವಯೋಮಿತಿ ಕಡ್ಡಾಯವಾಗಿ ೧೨ ವರ್ಷ ಆಗಿರಬೇಕೆಂದು ತಿಳಿಸಿದರು.
ಹರಾಜು ಪ್ರಕ್ರಿಯೆಯನ್ನು ಮೇ ೮ರಂದು ನಡೆಸಲು ತೀರ್ಮಾನಿಸಿದ್ದು, ಪಾಯಿಂಟ್ಸ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಐಕಾನ್ ಮತ್ತು ಕೀಪರ್ ಐಕಾನ್ ಅನ್ನು ಹರಾಜು ಪ್ರಕ್ರಿಯೆಯ ನಿಯಮಗಳ ಮೂಲಕ ಪಡೆದುಕೊಳ್ಳಬೇಕಿದೆ. ಪ್ರತಿ ಫ್ರಾಂಚೈಸಿಗೆ ೧೫ ಆಟಗಾರರು ಕಡ್ಡಾಯವಾಗಿ ಇರಬೇಕು. ಕ್ರೀಡಾಕೂಟವನ್ನು ರೆಡ್ ಲೆದರ್ ಬಾಲ್‌ನಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಆಟಗಾರರು ಅರ್ಜಿ ಹಾಕಲು ಮತ್ತು ಮಾಹಿತಿಗಾಗಿ
ಪುದಿಯನೆರವನ ರಿಷಿತ್ ಮಾದಯ್ಯ (೯೯೭೨೩೭೬೧೫೧), ಮೂಲೆಮಜಲು ಮನೋಜ್ (೯೪೮೩೧೧೧೧೩೪), ಕಟ್ಟೆಮನೆ ರೋಷನ್ (೯೯೮೦೯೩೭೩೩೫), ಕೂರನ ಪ್ರವೀಣ್ (೮೭೬೨೮೯೭೧೬೭), ಫ್ರಾಂಚೈಸಿ ಖರೀದಿಸಲು ಮತ್ತು ಮಾಹಿತಿಗಾಗಿ ಪಾಣತ್ತಲೆ ಜಗದೀಶ್ ಮಂದಪ್ಪ (೯೯೮೦೦೦೪೩೭೪), ಕೋಚನ ಅನುಪ್ (೯೪೪೮೨೭೫೭೭೫), ಬಾಳಾಡಿ ಮನೋಜ್ (೯೪೮೩೭೮೦೬೩೪), ಕುಟ್ಟನ ಪ್ರಶಾಂತ್ (೭೦೧೯೬೭೧೧೩೦) ಇವರುಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಕೋಚನ ಅನೂಪ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ವೇದಿಕೆ, ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ್ ಇದ್ದರು.