ಮಡಿಕೇರಿ, ಏ. ೨೬: ವಿಧಾನಸಭಾ ಚುನಾವಣೆ ಸಂಬAಧ ಈಗಾಗಲೇ ೮೦ ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡು ವಂತಾಗಲು ಗುರುತಿಸಲಾಗಿದ್ದು, ಈ ಸಂಬAಧ ತಾ.೨೯ ರಿಂದ ಮೇ ೬ ರವರೆಗೆ ಮನೆ ಮನೆಗೆ ತೆರಳಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸುವಂತಾಗಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಪೊಲಿಂಗ್ ಅಧಿಕಾರಿಗಳಿಗೆ ಬುಧವಾರ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟವರು ೧೯೯೨ ಮಂದಿ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೧೦ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೯೮೨ ಮಂದಿ, ಹಾಗೆಯೇ ವಿಶೇಷಚೇತನರು (ಪಿಡಬ್ಲುö್ಯಡಿ) ೪೮೨ ಮಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೮ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೧೪ ಮಂದಿ ವಿಶೇಷಚೇತನರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲಿದ್ದು, ಒಟ್ಟಾರೆ ೨,೪೭೪ ಮಂದಿ ಅಂಚೆ ಮತಪತ್ರ ಮೂಲಕ ಮತ ಹಕ್ಕು ಚಲಾಯಿಸಲಿದ್ದಾರೆ ಎಂದರು.

ಚುನಾವಣಾ ಆಯೋಗದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಲ್ಪವೂ ಲೋಪ ಉಂಟಾಗದAತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. (ಮೊದಲ ಪುಟದಿಂದ) ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಮಾತನಾಡಿ, ೮೦ ವರ್ಷ ಮೇಲ್ಪಟ್ಟವರು ಮತಗಟ್ಟೆಗೆ ತೆರಳಲು ಸಾಧ್ಯ ಇಲ್ಲದಿರುವವರಿಗೆ ಅಂಚೆ ಮತಪತ್ರವನ್ನು ನೀಡಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದರು.

ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಲ್ಲಾಳ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿ ಈಗಾಗಲೇ ನಮೂನೆ-೧೨ ಡಿ ಯನ್ನು ಸಂಬAಧಪಟ್ಟ ಬಿಎಲ್‌ಒಗಳ ಮೂಲಕ ವಿತರಿಸಲು ಕ್ರಮವಹಿಸಲಾಗಿದ್ದು, ಅದರಂತೆ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದರು.

ಪ್ರತಿಯೊಂದು ಮತದಾರರ ಮನೆ ತಲುಪಲು ಅನುಕೂಲವಾಗುವಂತೆ ರೂಟ್ ಮ್ಯಾಪ್ ತಯಾರಿಸಲಾಗಿದ್ದು, ಪ್ರತೀ ಮಾರ್ಗದಲ್ಲಿ ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬ ಮೈಕ್ರೋ ವೀಕ್ಷಕರು, ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರನ್ನು ನಿಯೋಜಿಸಲಾಗುತ್ತದೆ ಎಂದರು.

ಪೋಲಿAಗ್ ಅಧಿಕಾರಿಗಳು ಅಂಚೆ ಮತಪತ್ರದ ಮತದಾರರ ಪಟ್ಟಿ, ಅಂಚೆ ಮತಪತ್ರ, ಎನ್ವಲಪ್ಸ್, ಪೆನ್, ಇಂಕ್, ಪ್ಯಾಡ್, ಬ್ಲೂಸ್ಟಿಕ್, ಕೌಂಟರ್ ಫೈಲ್‌ಗಳನ್ನು ಸಾಗಿಸುವ ಕ್ಯಾನ್ವಸ್ ಬ್ಯಾಗ್, ವೋಟಿಂಗ್ ಕಂಪಾರ್ಟ್ಮೆAಟ್, ಪೋಸ್ಟಲ್ ಬ್ಯಾಲೆಟ್ ಟ್ರಂಕ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಿದೆ ಎಂದರು.

ಪೋಲಿAಗ್ ಅಧಿಕಾರಿಗಳು ಮತದಾರರು ನಮೂನೆ-೧೨ ಡಿ ನಲ್ಲಿ ನಮೂದಿಸಿರುವ ವಿಳಾಸಕ್ಕೆ ಭೇಟಿ ನೀಡಬೇಕು. ಮತದಾನದ ಮುಂಚಿತವಾಗಿಯೇ ಬಿಎಲ್‌ಓಗಳ ಮೂಲಕ ಮಾಹಿತಿ ನೀಡಬೇಕು ಎಂದರು.

ಈಗಾಗಲೇ ನೀಡಿರುವ ವಿಳಾಸದಲ್ಲಿ ಭೇಟಿ ಸಮಯದಲ್ಲಿ ಲಭ್ಯವಾಗದಿದ್ದಲ್ಲಿ, ಎರಡನೇ ಬಾರಿ ಭೇಟಿ ನೀಡುವ ಬಗ್ಗೆ ಸಮಯ ಮತ್ತು ದಿನಾಂಕ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಅಂಚೆ ಮತಪತ್ರ ಮೂಲಕ ಮತದಾನ ಮಾಡುವ ಮತದಾರರ ಗುರುತಿನ ಬಗ್ಗೆ ದಾಖಲಿಸಬೇಕು. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯು ಮತದಾನ ಮಾಡಿರುವ ಬಗ್ಗೆ ಸೂಕ್ತವಾಗಿ ಗುರುತಿಸಬೇಕು ಎಂದರು.

ಮತದಾರರ ಮನೆಯಲ್ಲಿಯೇ ವೋಟಿಂಗ್ ಕಂಪಾರ್ಟ್ಮೆAಟನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಬೇಕು. ಗೌಪ್ಯ ಮತದಾನದ ಕುರಿತು ಗಮನಹರಿಸಬೇಕು. ಈ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ತಿಳಿಸಿದರು.

ಮತದಾನ ಪ್ರಾರಂಭದಿAದ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದAತೆ ಮತದಾನದ ಸಂಪೂರ್ಣ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದರು.

ಸಂಬAಧಪಟ್ಟ ಮೈಕ್ರೋ ವೀಕ್ಷಕರು ಮತದಾನ ಸೂಕ್ತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಹಾಗೂ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಖಾತರಿಪಡಿಸಿಕೊಂಡು ವರದಿ ನೀಡಬೇಕು ಎಂದು ಹೇಳಿದರು. ಚುನಾವಣಾಧಿಕಾರಿಗಳಾದ ಶಬಾನಾ ಎಂ.ಶೇಖ್, ತಹಶೀಲ್ದಾರರು, ಇತರರು ಇದ್ದರು.