ಚೆಯ್ಯಂಡಾಣೆ, ಏ. ೨೪: ಸ್ಥಳೀಯ ನರಿಯಂದಡ ಶ್ರೀ ಭಗವತಿ ಮತ್ತು ವಿಷ್ಣುಮೂರ್ತಿ ದೇವಾಲಯದ ಹಳೆ ಆಡಳಿತ ಮಂಡಳಿಯ ಹಿರಿಯರನ್ನು ಕಳೆದ ದೊಡ್ಡ ಹಬ್ಬದ ದಿನದಂದು ದೇವಸ್ಥಾನ ಆವರಣದಲ್ಲಿ ನೂತನ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಳೆದ ೨೬ ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಬೊವ್ವೇರಿಯಂಡ ಲವಕುಮಾರ್, ಉಪಾಧ್ಯಕ್ಷರಾಗಿ ೨೩ ವರ್ಷಗಳಿಂದ ಸೇವೆ ಸಲ್ಲಿಸಿದ ಮಕ್ಕಿಮನೆ ಶಿವರಾಂ ಹಾಗೂ ಪೊಕ್ಕುಳಂಡ್ರ ದನೋಜ್, ಕಾರ್ಯದರ್ಶಿಯಾಗಿ ೩೦ ವರ್ಷಗಳಿಂದ ಸೇವೆ ಸಲ್ಲಿಸಿದ ಪೊಕ್ಕುಳಂಡ್ರ ನಾಣಯ್ಯ, ಕೋಶಾಧಿಕಾರಿಯಾಗಿ ೧೫ ವರ್ಷಗಳಿಂದ ಕಾರ್ಯ ನಿರ್ವಹಿಸಿದ ಕೋಲಿರ ನಾಣಯ್ಯ ಅವರನ್ನು ಹಿರಿಯರಾದ ಹರೀಶ್ ತಂತ್ರಿ, ಲೆಫ್ಟಿನೆಂಟ್ ಕರ್ನಲ್ ನಾರಾಯಣ ಮೂರ್ತಿ, ಕುಕ್ಕೆಮನೆ ನಾರಾಯಣ ಮೂರ್ತಿ, ಶಿವ ಶರ್ಮ ಹಾಗೂ ಮಕ್ಕಿಮನೆ ಚಂದ್ರಶೇಖರ್ ಅವರು ಸನ್ಮಾನಿಸಿದರು.
ಈ ಸಂದರ್ಭ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಬಟ್ಟಿಯಂಡ ಜಯರಾಂ, ಕಾರ್ಯದರ್ಶಿ ಮಕ್ಕಿಮನೆ ಸುಧೀರ್, ಉಪಾಧ್ಯಕ್ಷರಾದ ಅನಂತ್ ಕುಮಾರ್, ಛಾಯಾ ಪ್ರಕಾಶ್, ಆಡಳಿತ ಮಂಡಳಿಯ ಕುಕ್ಕೆಮನೆ ರಾಜಾರಾಂ, ಬಟ್ಟಿಯಂಡ ಅಶೋಕ್, ದಿಲೀಪ್, ಮನೋಜ್, ಹರಿಪ್ರಸಾದ್, ಚೈಯಂಡ ಶಂಕರಿ, ನವೀನ್, ದೇವಪ್ಪ, ಶರಣು ದೇವಯ್ಯ, ಉದಯ್ ಪವನ್, ನಾಣಯ್ಯ, ಮೋಹನ್ ಕುಮಾರ್ ಮತ್ತಿತರರು ಇದ್ದರು.