*ಸಿದ್ದಾಪುರ, ಏ. ೨೪: ಕೊಡಗು ಜಿಲ್ಲೆ ಪ್ರಸ್ತುತ ಹಿಂದೆAದೂ ಕಂಡರಿಯದಷ್ಟು ತಾಪಮಾನವನ್ನು ಎದುರಿಸುತ್ತಿದೆ. ಅತ್ಯಂತ ತಂಪಾದ ವಾತಾವರಣದ ದಕ್ಷಿಣ ಕಾಶ್ಮೀರ ವೆಂದೇ ಹೆಸರಾದ ಕೊಡಗಿನಲ್ಲಿ ಈ ಮಟ್ಟದ ಬಿಸಿಲಿನ ಬೇಗೆ ಜನರನ್ನು ಹಿಂದೆ ಕಾಡಿರಲಿಲ್ಲ.
ದಿನದಿಂದ ದಿನಕ್ಕೆ ಬಿಸಿಲಿನ ವಾತಾವರಣ ಹೆಚ್ಚಾಗುತ್ತಲೇ ಇದ್ದು, ನದಿ, ಕೆರೆ, ಹೊಳೆಯಲ್ಲಿ ನೀರು ಕ್ಷೀಣಿಸುತ್ತಿದೆ. ಕಾಫಿ ತೋಟಗಳು ಒಣಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಪ್ರಸ್ತುತ ವರ್ಷ ಉತ್ತಮ ಕಾಫಿ ಇಳುವರಿ ಬಂದಿದೆ. ಜೊತೆಯಲ್ಲಿ ದಾಖಲೆಯ ಬೆಲೆಯೂ ಇದೆ. ಆದರೆ ಮುಂದಿನ ವರ್ಷ ಇಳುವರಿ ಸಂಪೂರ್ಣ ಕುಸಿಯುವ ಸಾಧ್ಯತೆ ಗಳಿದೆ. ಇಷ್ಟೊತ್ತಿಗಾಗಲೇ ಮಳೆ ಬಂದು ಗಿಡಗಳಿಗೆ ಜೀವ ತುಂಬ ಬೇಕಾಗಿತ್ತು. ಆದರೆ ವಾಡಿಕೆ ಮಳೆ ಯಾಗದೆ ಕಾಫಿ ತೋಟ ನಾಶವಾಗು ತ್ತಿದೆ. ಜಲಮೂಲಗಳು ಬತ್ತುತ್ತಿರುವುದ ರಿಂದ ಮೋಟಾರ್ ಮೂಲಕ ತೋಟ ಗಳಿಗೆ ನೀರು ಹಾಯಿಸಲು ಕೂಡ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರು ವಾಗ ಇಳುವರಿ ನಿರೀಕ್ಷೆ ಮಾಡುವು ದಾರು ಹೇಗೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯ ಕೆಲವೆಡೆಗಳಲ್ಲಿ ಮಾತ್ರ ಸಣ್ಣ ಪ್ರಮಾಣದ ಮಳೆಯಾಗಿದೆ.
ವನ್ಯಜೀವಿಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದೂ ಕಷ್ಟ ಎಂಬ ಸ್ಥಿತಿ ಕಂಡು ಬಂದಿದೆ. ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಗಂಭೀರತೆಯನ್ನು ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ. ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಪರದಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಮಳೆಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿದೆ.