ಕಣಿವೆ, ಏ. ೨೪: ಜೀವನದಿ ಕಾವೇರಿ ಬೇಸಿಗೆಯಲ್ಲಿ ನೀರಿಲ್ಲದೇ ಒಂದು ವೇಳೆ ಬತ್ತಿದರೂ ಕೂಡ ಶಿರಂಗಾಲದ ಉಮಾಮಹೇಶ್ವರ ದೇವಾಲಯದ ಬಳಿ ಹರಿದಿರುವ ಕಾವೇರಿ ನದಿಯಲ್ಲಿ ಯಾವಾಗಲೂ ನೀರು ಇರುತ್ತಿತ್ತು. ನದಿಯೊಳಗಿನ ಕಲ್ಲು ಬಂಡೆಗಳು ಕಾಣದ ಹಾಗೆ ನೀರು ಸಂಗ್ರಹವಾಗಿರುತ್ತಿತ್ತು. ಆದರೆ, ಈ ಬಾರಿ ವರುಣನ ಮುನಿಸಿನಿಂದ ಏರಿದ ತಾಪಮಾನಕ್ಕೆ ಸಂಗ್ರಹಗೊAಡ ನೀರೆಲ್ಲಾ ಬರಿದಾಗುತ್ತಿದೆ. ಇದು ಗ್ರಾಮದ ಜನರಲ್ಲಿ ಭೀತಿಯನ್ನು ಮೂಡಿಸಿದೆ. ದಶಕಗಳ ಹಿಂದೆ ಬರಗಾಲ ಆವರಿಸಿ ಮಳೆ ಸುರಿಯದಿದ್ದಾಗಲೂ ಇಲ್ಲಿನ ನದಿ ಇಷ್ಟೊಂದು ಪ್ರಮಾಣದಲ್ಲಿ ಬತ್ತಿರಲಿಲ್ಲ.

ಆದರೆ, ಈ ಬಾರಿ ಏಕೋ ಏನೋ ವರುಣ ಮೂರು ತಿಂಗಳಿನಿAದ ಕೋಪಿಸಿಕೊಂಡ ಪರಿಣಾಮ ನದಿಯ ಒಡಲು ಕ್ಷೀಣವಾಗಿದೆ. ಒಂದು ವೇಳೆ ಒಂದು ವರ್ಷ ಮಳೆ ಕೈಕೊಟ್ಟರೆ ನದಿ ಹಾಗೂ ನದಿಯ ನೀರಿನ ಅವಲಂಬಿತ ಜಲಚರಗಳು ಹಾಗೂ ಜೀವಕೋಟಿಗಳ ಪರಿಸ್ಥಿತಿ ಏನಾಗಬಹುದು ಎಂಬ ಚಿಂತೆ ಬಹುತೇಕರನ್ನು ಕಾಡುತ್ತಿದೆ.

- ಕೆ.ಎಸ್. ಮೂರ್ತಿ