ಕೆಳ ಹಂತದ ನ್ಯಾಯಾಲಯದ ಆದೇಶಕ್ಕೆ ಪಾಟ್ನಾ ಹೈಕೋರ್ಟ್ ತಡೆ
ಪಾಟ್ನಾ, ಏ. ೨೪: ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮೋದಿ ಉಪನಾಮ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ಪಾಟ್ನಾ ಹೈಕೋರ್ಟ್ ತಡೆ ನೀಡಿದೆ. ಪಾಟ್ನಾದ ಕೆಳಹಂತದ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಪ್ರಕರಣಕ್ಕೆ ಸಂಬAಧಿಸಿದAತೆ ತಾ. ೧೨ ರಂದು ಕೋರ್ಟ್ ಎದುರು ಹಾಜರಾಗುವಂತೆ ಸೂಚಿಸಿತ್ತು. ಕೆಳಹಂತದ ಈ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಪಾಟ್ನಾ ಹೈಕೋರ್ಟ್ ಮೊರೆ ಹೋಗಿದ್ದರು. ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ರಾಹುಲ್ ಗಾಂಧಿ ವಿರುದ್ಧ ಪಾಟ್ನಾದ ಎಂಪಿ/ ಎಂಎಲ್‌ಎ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾ.೧೮ ರಂದು ಎಂಪಿ/ಎAಎಲ್‌ಎ ಕೋರ್ಟ್ನ ವಿಶೇಷ ನ್ಯಾಯಾಂಗ ಮ್ಯಾಜಿಸ್ಟೆçÃಟ್ ಆದಿ ದೇವ್ ರಾಹುಲ್ ಗಾಂಧಿ ಅವರಿಗೆ ತಾ. ೧೨ ರಂದು ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪ್ರತಿವಾದಿ ವಕೀಲರು ಮತ್ತೊಂದು ದಿನಾಂಕವನ್ನು ಕೋರಿದರು. ಇದಕ್ಕೆ ನ್ಯಾಯಾಧೀಶರು ತಾ. ೨೫ ರಂದು ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕದAದು ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ವಕೀಲರಿಗೆ ಸೂಚನೆ ನೀಡಿದರು.
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ತಿರಸ್ಕರಿಸಿ: ಅಮಿತ್ ಶಾ ಒತ್ತಾಯ
ಸಕಲೇಶಪುರ, ಏ. ೨೪: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು. ಅಲ್ಲದೇ, ಜಿಲ್ಲೆಯಲ್ಲಿ ಕನಿಷ್ಟ ನಾಲ್ವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು. ಸಕಲೇಶಪುರದ ಆಲೂರಿನ ರೋಡ್ ಶೋ ವೇಳೆಯಲ್ಲಿ ಮಾತನಾಡಿದ ಅಮಿತ್ ಶಾ, ಭಾರೀ ಅಂತರದಿAದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಡಬಲ್ ಎಂಜಿನ್ ಸರ್ಕಾರದ ಮುಖ್ಯಸ್ಥರಾಗಿರುವ ನರೇಂದ್ರ ಮೋದಿ ಅವರ ಕೈ ಬಲಪಡಿಸುವಂತೆ ಹೇಳಿದರು. ಪರೋಕ್ಷವಾಗಿ ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಂ ಎಂದು ಕರೆದ ಶಾ, ಒಂದು ವೇಳೆ ಜೆಡಿಎಸ್‌ಗೆ ಮತ ನೀಡಿದರೆ ಅದು ಕಾಂಗ್ರೆಸ್‌ಗೆ ಪ್ರಯೋಜನವಾಗಲಿದೆ ಎಂದರು. ವೀರಶೈವ ಲಿಂಗಾಯತ, ಒಕ್ಕಲಿಗ, ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಅಮಿತ್ ಶಾ, ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರು.
ಮಾಜಿ ಪ್ರಿಯಕರನ ಮೇಲೆ ಆಸಿಡ್ ಎಸೆದ ಯುವತಿ
ಅಗ್ದಲ್‌ಪುರ, ಏ. ೨೪: ಬೇರೆ ಯುವತಿ ಜೊತೆಗೆ ವಿವಾಹವಾಗುತ್ತಿದ್ದ ಮಾಜಿ ಪ್ರಿಯಕರ ಮೇಲೆ ೨೨ ವರ್ಷದ ಯುವತಿಯೊಬ್ಬಳು ಆಸಿಡ್ ಎಸೆದಿರುವ ಘಟನೆ ಛತ್ತೀಸ್‌ಗಡಧ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಬಸ್ತಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಪಾಲ್ ತಿಳಿಸಿದ್ದಾರೆ. ಛೋಟೆ ಅಮಾಬಲ್ ಗ್ರಾಮದಲ್ಲಿ ತಾ. ೧೯ ರಂದು ದಮೃಧರ್ ಬಘೇಲ್ (೨೫) ಎಂಬಾತ ೧೯ ವರ್ಷದ ಯುವತಿಯೊಂದಿಗೆ ವಿವಾಹವಾಗುತ್ತಿದ್ದಾಗ ಈ ಘಟನೆ ನಡೆದಿದೆ. ಆಸಿಡ್ ದಾಳಿಯಿಂದ ವಧು ಹಾಗೂ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ೧೦ ಜನರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಪೊಲೀಸರು ಅಪರಿಚಿತ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ವರನ ಮಾಜಿ ಪ್ರೇಮಿ ಆಸಿಡ್ ದಾಳಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದ ನಂತರ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಾಲ್ ಮಾಹಿತಿ ನೀಡಿದರು. ಅನೇಕ ವರ್ಷಗಳಿಂದ ತನ್ನೊಂದಿಗೆ ಸಂಬAಧ ಹೊಂದಿದ್ದ ಬಘೇಲ್, ತನಗೆ ಮೋಸ ಮಾಡಿ, ಬೇರೊಂದು ಯುವತಿ ಜೊತೆಗೆ ವಿವಾಹವಾಗುತ್ತಿದ್ದರಿಂದ ಮೆಣಸಿನಕಾಯಿ ತೋಟದಿಂದ ಆಸಿಡ್ ಕದ್ದು ಈ ಕೃತ್ಯವೆಸಗಿರುವುದಾಗಿ ಯುವತಿ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾಳೆ.
ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ: ವ್ಯಕ್ತಿ ಬಂಧನ
ನವದೆಹಲಿ, ಏ. ೨೪: ನ್ಯೂಯಾರ್ಕ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಅಮೆರಿಕನ್ ಏರ್ ಲೈನ್ ವಿಮಾನದಲ್ಲಿ ಭಾರತ ಮೂಲದ ಓರ್ವ ವ್ಯಕ್ತಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನ್ಯೂಯಾರ್ಕ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವ್ಯಕ್ತಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಏರ್‌ಲೈನ್ಸ್ ಸಿಬ್ಬಂದಿಗಳು ಹೇಳಿರುವಂತೆ ಆರೋಪಿ ಭಾರತೀಯ ಪ್ರಯಾಣಿಕ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆಯು ಅಮೇರಿಕನ್ ಏರ್‌ಲೈನ್ಸ್ ಫ್ಲೆöÊಟ್ ಎಎ ೨೯೨ನಲ್ಲಿ ನಡೆದಿದ್ದು, ವಿಮಾನವು ಭಾನುವಾರ ರಾತ್ರಿ ೯ ಗಂಟೆ ಸುಮಾರಿಗೆ ಇಂದಿರಾಗಾAಧಿ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಪ್ರಯಾಣಿಕನÀನ್ನು ಬಂಧಿಸಿದ್ದಾರೆ.
ಹತ್ಯೆ ಪ್ರಕರಣ: ೧೯ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ಕೋರ್ಟ್
ಕೊಚ್ಚಿ, ಏ. ೨೪: ಜಾಕೋಬೈಟ್ ಮತ್ತು ಆರ್ಥೊಡಾಕ್ಸ್ ಮಲಂಕರ ಚರ್ಚ್ಗಳ ನಡುವಿನ ವೈಷಮ್ಯಕ್ಕೆ ಸಂಬAಧಿಸಿದ ೨೦೦೨ರ ಮಲಂಕರ ವರ್ಗೀಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪಾದ್ರಿ ಸೇರಿದಂತೆ ಎಲ್ಲಾ ೧೯ ಆರೋಪಿಗಳನ್ನು ಸಿಬಿಐ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ. ಜಾಕೋಬೈಟ್ ಬಣದ ಪಾದ್ರಿ ಸೇರಿದಂತೆ ೧೯ ಆರೋಪಿಗಳ ವಿರುದ್ಧ ಯಾವುದೇ ಸೂಕ್ತ ಸಾಕ್ಷö್ಯವನ್ನು ಸಲ್ಲಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಬಾಸ್ಕರ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲು ನಿರ್ಧರಿಸಿದರು. ಘಟನೆ ನಡೆದು ೨೦ ವರ್ಷಗಳ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ. ವಿಚಾರಣೆ ವೇಳೆ ಆರೋಪಿಗಳೆಂದು ಹೆಸರಿಸಲಾದ ಮೂವರು ಸಾವನ್ನಪ್ಪಿದ್ದರು. ೨೦೦೭ರಲ್ಲಿ ತನಿಖೆಯನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಹಿನ್ನಡೆಯಾಗಿದೆ. ೨೦೦೨ರ ಡಿಸೆಂಬರ್ ೫ ರಂದು ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಬಳಿಯ ಎಂಸಿ ರಸ್ತೆಯ ಕಾರ್ ವರ್ಕ್ಶಾಪ್‌ನ ಹೊರಗೆ ಮಲಂಕರ ಆರ್ಥೊಡಾಕ್ಸ್ ಬಣದ ನಾಯಕ ವರ್ಗೀಸ್ ಅವರನ್ನು ಗ್ಯಾಂಗ್ ಒಂದು ಹತ್ಯೆ ಮಾಡಿತ್ತು.
ಹೈಕೋರ್ಟ್ ನ್ಯಾಯಾಧೀಶರಿಗೆ ಸಿಜೆಐ ತರಾಟೆ
ನವದೆಹಲಿ, ಏ. ೨೪: ಹೈಕೋರ್ಟ್ ನ್ಯಾಯಾಧೀಶರೊಬ್ಬರು ಬಾಕಿ ಇರುವ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್ ಗರಂ ಆಗಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಬಾಕಿ ಇರುವ ಪ್ರಕರಣವೊಂದರ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಬಾಕಿ ಇರುವ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸಂದರ್ಶನ ನೀಡಬೇಕಿಲ್ಲ. ಅದು ನಿಜವಾದರೆ, ಈ ಪ್ರಕರಣವನ್ನು ಅವರು ವಿಚಾರಣೆ ನಡೆಸಬೇಕಿಲ್ಲ. ಅವರು ಈ ರೀತಿ ಮಾಡಿದ್ದರೆ, ವಿಚಾರಣೆಯಲ್ಲಿ ಭಾಗವಹಿಸಬೇಕಿಲ್ಲ. ಬಾಕಿ ಉಳಿದಿರುವ ವಿಷಯಗಳ ಕುರಿತು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುವುದು ನ್ಯಾಯಾಧೀಶರ ಕೆಲಸವಲ್ಲ. ಇದು ನಿಜವಾಗಿದ್ದರೆ, ಅವರು ಇನ್ನು ಮುಂದೆ ಈ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಾವು ತನಿಖೆಯನ್ನು ಮಾಡುವುದಿಲ್ಲ. ಆದರೆ ಟಿವಿ ಚರ್ಚೆಯಲ್ಲಿ ಅರ್ಜಿದಾರರ ಬಗ್ಗೆ ನ್ಯಾಯಾಧೀಶರು ಅಭಿಪ್ರಾಯವನ್ನು ನೀಡಿದರೆ, ಅವರು ಆ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಂತರ ಹೈಕೋರ್ಟ್ ಮುಖ್ಯಸ್ಥರು ಹೊಸ ಪೀಠವನ್ನು ರಚಿಸಬೇಕು ಎಂದು ಸಿಜೆಐ ಹೇಳಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧದ ನೇಮಕಾತಿ ಹಗರಣದಲ್ಲಿ ಅವರ ಪಾತ್ರಕ್ಕೆ ಸಂಬAಧಿಸಿದAತೆ ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸುವುದರ ಪ್ರಕರಣದ ಬಗ್ಗೆ ಕೋರ್ಟ್ ಈಗ ಹೆಚ್ಚಿನ ಮಹತ್ವ ನೀಡುವುದಿಲ್ಲ. ಆದರೆ ಹೈಕೋರ್ಟ್ ನ್ಯಾಯಾಧೀಶರು ಸಂದರ್ಶನ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ ಎಂದು ಚಂದ್ರಚೂಡ್ ಹೇಳಿದ್ದಾರೆ.