ಮಡಿಕೇರಿ, ಏ. ೨೪: ಮಡಿಕೇರಿ ಹೊರವಲಯದ ಕರ್ಣಂಗೇರಿಯಲ್ಲಿರುವ ಶ್ರೀ ರಾಜ ರಾಜೇಶ್ವರಿ ದೇವಿಯ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ ೨ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಹಾಗೂ ಆಡಳಿತ ಮಂಡಳಿ ಸದಸ್ಯ ದೇವರಾಜು ಅವರುಗಳು ಮೇ೨ರಂದು ಬೆಳಿಗ್ಗೆ ೬ ಗಂಟೆಗೆ ಧ್ವಜಾರೋಹಣದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದೆ. ೬.೩೦ಕ್ಕೆ ಗಣಪತಿ ಹೋಮ, ೭.೩೦ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ, ತೀರ್ಥಸ್ನಾನ, ೯.೨೦ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾ ಮಂಗಳಾರತಿ ನೆರವೇರಲಿದ್ದು, ೧೧.೪೫ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನಡೆಯಲಿದೆ. ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮಾರ್ಚನೆ, ಮಂಗಳಾರತಿ ನಡೆಯಲಿದೆ.

(ಮೊದಲನೇ ಪುಟದಿಂದ) ಅಪರಾಹ್ನ ೧೨ ಗಂಟೆಗೆ ಅನ್ನದಾನ ನೇರವೇರಲಿದ್ದು, ೧೨.೩೦ಕ್ಕೆ ತಾಯಿಯ ದರ್ಶನ ಇರಲಿದೆ ಎಂದು ತಿಳಿಸಿದರು.

ಸಂಜೆ ೬ ಗಂಟೆಗೆ ದೇವಾಲಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ನಡೆಯಲಿದೆ. ರಾತ್ರಿ ೯ ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ರಥ ಎಳೆಯಲು ಪುರುಷರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ೮ ದಿನಗಳಿಂದ ಶುದ್ಧ ಮುದ್ರಿಕೆಯಿಂದ ವ್ರತ ಪಾಲನೆ ಮಾಡಿಕೊಂಡು, ಆ ದಿನ ದೇವಸ್ಥಾನದಲ್ಲಿ ತೀರ್ಥಸ್ನಾನ ಮಾಡಿ ಬಿಳಿ ಪಂಚೆ ಹಾಗೂ ಕೆಂಪು ಬಣ್ಣದ ಶಾಲು ಧರಿಸಿರಬೇಕು. ಅಂತಹವರಿಗೆ ಮಾತ್ರ ಅವಕಾಶ ನೀಡಲಾಗುವುದೆಂದು ಹೇಳಿದರು.

ದೇವಾಲಯದಲ್ಲಿ ಪ್ರತಿ ಸೋಮವಾರ ರಾತ್ರಿ ೮ ಗಂಟೆಯಿAದ ಹಾಗೂ ಪ್ರತಿ ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿAದ, ಶುಕ್ರವಾರ ಬೆಳಿಗ್ಗೆ ೧೦ ಹಾಗೂ ಶನಿವಾರ ರಾತ್ರಿ ೮ಗಂಟೆಯಿAದ ಮತ್ತು ಅಮಾವಾಸ್ಯೆಗಳಂದು ರಾತ್ರಿ ೮ ಗಂಟೆಯಿAದ ಪೂಜೆ ಪ್ರಾರಂಭವಾಗಲಿದೆ. ಎಲ್ಲ ಪೂಜಾ ದಿನಗಳಂದು ಭಕ್ತರಿಗೆ ಅನ್ನದಾನ ಇರುತ್ತದೆ ಎಂದು ತಿಳಿಸಿದರು.

ದೇವಾಲಯದ ಸೇವಕರಾದ ಚುಮ್ಮಿದೇವಯ್ಯ ಹಾಗೂ ತಾರಾಪ್ರಸಾದ್ ಮಾತನಾಡಿ; ವರ್ಷಂಪ್ರತಿ ಮೇ ತಿಂಗಳ ಪ್ರಥಮ ಮಂಗಳವಾರದAದು ವಾರ್ಷಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ಚುನಾವಣಾ ಸಮಯವಾಗಿದ್ದು, ನೀತಿ ಸಂಹಿತೆಗೆ ಅಡ್ಡಿಯಾಗದಂತೆ ಪಾಲನೆ ಮಾಡಿಕೊಂಡು ಉತ್ಸವ ಆಚರಿಸಲಾಗುವುದು. ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ಮನವಿ ಮಾಡಿದರು.