ಚೆಟ್ಟಳ್ಳಿ, ಏ. ೨೪: ಕಾಫಿ ನಾಡಾದ ಕೊಡಗಿನ ಕಾಫಿಯು ರಾಪ್ಟಿçÃಯ ಹಾಗೂ ಅಂತರರಾಪ್ಟಿçÃಯ ಮಟ್ಟದಲ್ಲಿ ಹೆಸರುಗಳಿಸಿದರೂ ಹಲವು ವರ್ಷ ಗಳಿಂದ ಕೊಡಗಿನಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆಯಾಗುವುದೆಂಬ ಕನಸು ಇನ್ನೂ ನನಸ್ಸಾಗಲಿಲ್ಲ.

೧೯೪೬ರಲ್ಲಿ ಆಗಿನ ಮೈಸೂರು ಸರಕಾರವು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಕಾಫಿ ಪ್ರಯೋಗ ಶಾಲೆಯೊಂದನ್ನು ಸ್ಥಾಪಿಸಿತು. ೧೯೪೬ರಲ್ಲಿ ಈ ಪ್ರಯೋಗ ಶಾಲೆಯನ್ನು ಕಾಫಿಮಂಡಳಿ ವಹಿಸಿಕೊಂಡು ಕಾಫಿ ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಿ ಕಾಫಿ ಗಿಡದ ಪೋಷಣೆ, ತಳೀಕರಣ ಹಾಗೂ ರಕ್ಷಣೆಯೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು.

ಕಾಫಿ ಮ್ಯೂಸಿಯಂಗೆ ಸೂಕ್ತ ಸ್ಥಳ ಯಾವುದು?

ನಂತರ ೧೯೪೭ರಲ್ಲಿ ಕೊಡಗಿನ ಕೇಂದ್ರ ಸ್ಥಾನವಾದ ಕುಶಾಲನಗರ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿರುವ ಚೆಟ್ಟಳ್ಳಿಯಲ್ಲಿ ಕಾಫಿ ಸಂಶೋಧನೆಯ ಕೇಂದ್ರಕ್ಕೆ ಸೂಕ್ತ ಸ್ಥಳವೆಂದು ಗುರುತಿಸಿ ಕಾಫಿü ಸಂಶೋಧನೆಯ ಉಪ ಕೇಂದ್ರವನ್ನು ಸ್ಥಾಪಿಸಲಾಯಿತು. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ರೂಪಿಸಿರುವ ಕಾಫಿ ಬೆಳೆಗಳ ಹೊಸತಳಿಯ ವಿಧಾನವನ್ನು ದೊಡ್ಡ ಪ್ರಮಾಣದಲಿ ್ಲರೂಪಿಸುವ ಕಾರ್ಯವನ್ನು ಮಾಡಲು ಈ ಕೇಂದ್ರ ಕಾರ್ಯನಿರ್ವಹಿಸತೊಡಗಿತು.

ಸುಮಾರು ೩೦೦ ಎಕರೆ (೧.೨೦ ಹೆಕ್ಟೇರ್) ವಿಸ್ತೀರ್ಣ ಹೊಂದಿರುವ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ೭೭ ಹೆಕ್ಟೇರ್ ಅರೇಬಿಕಾ ಹಾಗೂ ೩೧ ಹೆಕ್ಟೇರ್‌ನಲ್ಲಿ ರೊಬಸ್ಟಾ ಬೆಳೆಯನ್ನು ಬೆಳೆಯಲಾಗಿದೆ. ಪ್ರಪಂಚದ ಎಲ್ಲಾ ಕಾಫಿ ತಳಿಗಳಿದ್ದು (ಜೀನ್‌ಬ್ಯಾಂಕ್) ಇಲ್ಲಿ ತಳಿ ಅಭಿವೃದ್ಧಿ, ಸಸ್ಯಶಾರೀರಿಕ ಕ್ರಿಯಾಶಾಸ್ತç, ಬೇಸಾಯಶಾಸ್ತç, ಮಣ್ಣು ವಿಜ್ಞಾನ ಮತ್ತು ಪರೀಕ್ಷಾ ವಿಭಾಗ, ರೋಗ ಹಾಗೂ ಕೀಟಶಾಸ್ತç ವಿಭಾಗ, ವಿವಿಧ ರೋಗಗಳ ಬಗ್ಗೆ ಸಂಶೋಧನೆ ಹಾಗೂ ಪರಿಹಾರ ವಿಭಾಗವಿದ್ದು ಸಂಶೋಧನೆಗಳು ನಡೆಯುತ್ತಿವೆ.

ಅಲ್ಲದೆ ವರ್ಷ ಪೂರ್ತಿ ಕೊಡಗಿನ ನಾನಾ ಕಡೆಗಳಲ್ಲಿ ಕಾಫಿ ಗಿಡಗಳಲ್ಲಿ ಕಂಡುಬರುವ ಕೀಟಗಳ ಬಗ್ಗೆ, ರೋಗಗಳ ಬಗ್ಗೆ ಮಾಲೀಕರಿಗೆ ಕೈಗೊಳ್ಳ ಬೇಕಾದ ರಕ್ಷಣಾಕ್ರಮಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕಾರ್ಯಗಾರಗಳನ್ನೆಲ್ಲ ನುರಿತ ಕಾಫಿ ಸಂಶೋಧಕರಿAದ ನೀಡಲಾಗುತ್ತಾ ಬರುತ್ತಿದೆ.

ಕೊಡಗಿನ ಕೆಲವೆಡೆ ಕಾಫಿ ಮಂಡಳಿ ಉಪಕೇಂದ್ರಗಳ ಕಾರ್ಯವನ್ನು ಸ್ಥಗಿತಗೊಳಿಸುತ್ತಾ ಬರುತ್ತಿವೆಯಾದರೂ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದೆ. ಹಲವು ವರ್ಷಗಳ ಹಿಂದಿನಿAದಲೇ ಚಿಕ್ಕಮಗಳೂರಿನಲ್ಲಿ ಸ್ಥಾಪನೆಗೊಂಡAತಹ ಹೈಟೆಕ್ ಕಾಫಿ ಮ್ಯೂಸಿಯಂ ಫಲಕಾರಿಯಾಗಿದೆ. ಕೊಡಗಿನಿಂದ ಆಯ್ಕೆಗೊಂಡ ಕಾಫಿ ಮಂಡಳಿಯ ನಿರ್ದೇಶಕರುಗಳು ಮಡಿಕೇರಿಯಲ್ಲಿ ಹಾಗೂ ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿದರೆ ಕಾಫಿಮಂಡಳಿ ಮ್ಯೂಸಿಯಂ ಸ್ಥಾಪನೆಗೆ ಜಾಗಬೇಕೆಂದು ಸಲ್ಲಿಸಿದ ಪ್ರಸ್ತಾವನೆ ಈವರೆಗೂ ಫಲಕಾರಿಯಾಗಲಿಲ್ಲ.

ಮಡಿಕೇರಿ ಪ್ರವಾಸಿಗರ ಕೇಂದ್ರ ಸ್ಥಾನವಾದರೂ ಕಾಫಿಯ ಬಗ್ಗೆ ತಿಳಿಯಲು ಚೆಟ್ಟಳ್ಳಿಯ ಕಾಫಿ ಉಪಸಂಶೋಧನಾ ಕೇಂದ್ರಕ್ಕೆ ಬಂದು ಮಾಹಿತಿ ಪಡೆಯಬೇಕು. ಇವೆಲ್ಲದಕ್ಕೂ ಸೂಕ್ತ ಜಾಗ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರವೇ, ಆದರಿಂದ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರದಲ್ಲೇ ಕಾಫಿ ಮ್ಯೂಸಿಯಂ ಸ್ಥಾಪನೆಯಾಗಲಿ ಎಂಬುದು ಕೊಡಗಿನ ಕಾಫಿ ಬೆಳೆಗಾರರ ಆಶಯ.

ಅದೆಷ್ಟೋ ದೇಶಿ, ವಿದೇಶಿಯರು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಕೊಡಗಿನ ಕಾಫಿಯ ವ್ಯವಸ್ಥೆಯನ್ನು ನೋಡಿ ಕುಶಿಪಟ್ಟು ಇನ್ನಷ್ಟು ಅಭಿವೃದ್ಧಿಯಾಗಬೇಕೆಂದು ಸಲಹೆ ನೀಡಿದ್ದಾರೆ. ಇಲ್ಲಿಯೇ ಕಾಫಿ ಮ್ಯೂಸಿಯಂಆದರೆ ಅಂದು ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರುಗಳಿಸಿದ್ದ ಈ ಕೇಂದ್ರಕ್ಕೆ ಪುನಃ ಹೆಸರುಗಳಿಸುವ ಸಾಧ್ಯತೆ ಹೆಚ್ಚಿದೆ.

ಮುಂದೆ ಗದ್ದುಗೆ ಏರಲಿರುವ ಜನಪ್ರತಿನಿಧಿಗಳೇ ಕಾಫಿನಾಡಿನ ಹಲವು ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವುದರ ಜೊತೆಗೆ ಕಾಫಿ ಮ್ಯೂಸಿಯಂ ಸ್ಥಾಪನೆಗೆ ಮುತುವರ್ಜಿ ವಹಿಸಲಿ ಎಂಬುದು ಕಾಫಿ ಬೆಳೆಗಾರರ ಒತ್ತಾಯ.