ಮಡಿಕೇರಿ, ಏ. ೨೪: ವೀರಾಜಪೇಟೆ ವಿಭಾಗದ, ಅಮ್ಮತ್ತಿ ಶಾಖೆಗೆ ಒಳಪಡುವ ಗ್ರಾಮಗಳಾದ ಇಂಜಿಲಗೆರೆ, ಪುಲಿಯೇರಿ, ಅಮ್ಮತ್ತಿ, ಸಿದ್ದಾಪುರ, ಅಲಿತೋಪು, ಬಿಬಿಟಿಸಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೨೫ ರಂದು (ಇಂದು) ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ.
ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಹಾಗೂ ಸದರಿ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವಲಯ ಅರಣ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.