ಮಡಿಕೇರಿ, ಏ. ೨೪: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಭಾಷಿಕ ಗೌಡ ಕುಟುಂಬಗಳ ನಡುವೆ ಮರಗೋಡಿನ ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಮರದಾಳು, ಪೊನ್ನಚ್ಚನ, ಕತ್ರಿಕೊಲ್ಲಿ ತಂಡಗಳು ಪ್ರೀ ಕ್ವಾರ್ಟರ್ ಹಂತ ಪ್ರವೇಶಿಸಿವೆ. ಬೊಳ್ಳೂರು ಪಟ್ಟೆಮನೆ ತಂಡಗಳು ಮುಂದಿನ ಹಂತ ತಲುಪಿವೆ.

ಇಂದು ನಡೆದ ಪಂದ್ಯದಲ್ಲಿ ಕೊಂಪುಳಿರ ತಂಡ ಗುಡ್ಡೆಮನೆ ತಂಡವನ್ನು ೫-೦ ಗೋಲಿನಿಂದ ಸೋಲಿಸಿತು. ಮರದಾಳು ತಂಡ ಕೇಕಡ ತಂಡವನ್ನು ೪-೦ ಗೋಲಿನಿಂದ ಮಣಿಸಿತು. ಪಾಣತ್ತಲೆ ತಂಡ ಬೈಮನ ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೪-೨ ಗೋಲಿನಿಂದ ಸೋಲಿಸಿತು. ಕತ್ರಿಕೊಲ್ಲಿ ತಂಡ ಚೊಂಡೀರ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಮರದಾಳು ತಂಡ ಕೊಂಪುಳಿರ ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೪-೨ ಗೋಲಿನಿಂದ ಮಣಿಸಿತು. ಪೊನ್ನಚ್ಚನ ತಂಡ ಪಾಣತ್ತಲೆ (ಬಿ) ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಕತ್ರಿಕೊಲ್ಲಿ ತಂಡ ಉಪ್ಪುಂಡಿ ತಂಡವನ್ನು

೧-೦ ಗೋಲಿನಿಂದ ಸೋಲಿಸಿತು.