ನಾಪೋಕ್ಲು, ಏ. ೨೪: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಬಾಳೆಯಡ ಕಪ್ ಕ್ರಿಕೆಟ್‌ನ ಎರಡನೆಯ ದಿನದ ಪಂದ್ಯಾಟದಲ್ಲಿ ಬೊಳ್ಳಚೆಟ್ಟಿರ, ಬೊಪ್ಪಡತಂಡ, ಮಾಚಂಗಡ, ಕೋಚೆರ, ಪಳಂಗAಡ, ತೀತಿರ, ಮುದ್ದಂಡ, ನೂರೆರ, ನಂಬುಡಮಡ, ಕುಲ್ಲಚಂಡ, ಬಾಳೆಯಡ ಕುಟುಂಬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ಬಟ್ಟಿಯಂಡ ಮತ್ತು ಬೊಳ್ಳಚೆಟ್ಟಿರ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಳ್ಳಚೆಟ್ಟಿರ ತಂಡ ೨ ವಿಕೆಟ್ ನಷ್ಟಕ್ಕೆ ೧೨೯ ರನ್‌ಗಳ ಗುರಿ ನೀಡಿತು. ಇದನ್ನು ಬೆನ್ನೆಟ್ಟಿದ ಬಟ್ಟಿಯಂಡ ತಂಡ ೬ ವಿಕೆಟ್ ಕಳೆದುಕೊಂಡು ೮೦ ರನ್‌ಗಳಿಸಿ ಸೋಲನುಭವಿಸಿತು. ಮಾಚಂಗಡ ಮತ್ತು ಚಿಮ್ಮುಣಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚಿಮ್ಮುಣಿರ ತಂಡ ೪ ವಿಕೆಟ್ ನಷ್ಟಕ್ಕೆ ೪೭ ರನ್‌ಗಳ ಸವಾಲೊಡ್ಡಿತು. ಇದನ್ನು ಬೆನ್ನೆಟ್ಟಿದ ಮಾಚಂಗಡ ತಂಡ ೭ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಜಯಸಾಧಿಸಿತು. ನಂಬುಡಮಾಡ ಮತ್ತು ತೀತಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಂಬುಡಮಾಡ ತಂಡವು ೪ ವಿಕೆಟ್ ನಷ್ಟಕ್ಕೆ ೩೩ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ತೀತಿರ ತಂಡವು ೨ ವಿಕೆಟ್ ನಷ್ಟಕ್ಕೆ ೩೪ ರನ್‌ಗಳಿಸಿ ಮುನ್ನಡೆ ಸಾಧಿಸಿತು.

ಮೈದಾನ ೨ರಲ್ಲಿ ನಡೆದ ಬಲ್ಯಮಾಡ ಮತ್ತು ಪರವಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಬಲ್ಯಮಾಡ ತಂಡ ೩ ವಿಕೆಟ್ ನಷ್ಟಕ್ಕೆ ೫೦ ರನ್‌ಗಳಿಸಿತು. ಅದನ್ನು ಹಿಂಬಾಲಿಸಿದ ಪರವಂಡ ತಂಡ ೧ ವಿಕೆಟ್ ನಷ್ಟಕ್ಕೆ ೫೧ ರನ್‌ಗಳಿಸಿ ವಿಜಯಪತಾಕೆ ಹಾರಿಸಿತು. ಕುಲ್ಲಚಂಡ ಮತ್ತು ನಾಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುಲ್ಲಚಂಡ ತಂಡ ೩ ವಿಕೆಟ್ ನಷ್ಟಕ್ಕೆ ೫೬ ರನ್‌ಗಳಿಸಿದರೆ, ನಾಗಂಡ ತಂಡವು ೧ ವಿಕೆಟ್ ನಷ್ಟಕ್ಕೆ ೫೫ ರನ್‌ಗಳಿಸಿ ಸೋಲುಂಡಿತು. ಬಾಳೆಯಡ ಮತ್ತು ನೂರೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಳೆಯಡ ತಂಡವು ೪ ವಿಕೆಟ್ ನಷ್ಟಕ್ಕೆ ೭೦ ರನ್ ದಾಖಲಿಸಿದರೆ, ಇದನ್ನು ಬೆನ್ನಟ್ಟಿದ ನೂರೆರ ತಂಡವು ೮ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೈದಾನ ೩ರಲ್ಲಿ ಬೊಪ್ಪಡತಂಡ ಮತ್ತು ತಾತಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಪ್ಪಡತಂಡ ತಂಡ ೯ ವಿಕೆಟ್ ನಷ್ಟಕ್ಕೆ ೩೨ ರನ್‌ಗಳಿಸಿದರೆ, ಇದನ್ನು ಬೆನ್ನಟ್ಟಿದ ತಾತಪಂಡ ತಂಡವು ೧ ವಿಕೆಟ್ ನಷ್ಟಕ್ಕೆ ೩೩ ರನ್‌ಗಳಿಸಿ ವಿಜಯಪತಾಕೆ ಹಾರಿಸಿತು. ಪಳಂಗAಡ ಮತ್ತು ನುಚ್ಚಿಮಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಳಂಗAಡ ತಂಡ ೧ ವಿಕೆಟ್ ನಷ್ಟಕ್ಕೆ ೮೨ ರನ್ನಗಳಿಸಿದರೆ, ಅದನ್ನು ಹಿಂಬಾಲಿಸಿದ ನುಚ್ಚಿಮಣಿಯಂಡ ತಂಡ ೩ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೈರೇಟಿರ ಮತ್ತು ನೂರೆರ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ನೂರೆರ ತಂಡ ೩ ವಿಕೆಟ್ ನಷ್ಟಕ್ಕೆ ೬೫ ರನ್‌ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಬೈರೇಟಿರ ತಂಡ ೬ ವಿಕೆಟ್ ನಷ್ಟಕ್ಕೆ ೬೦ ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಕಲ್ಲುಮಾಡಂಡ ಮತ್ತು ತೀತಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಲ್ಲುಮಾಡಂಡ ತಂಡ ೬ ವಿಕೆಟ್ ನಷ್ಟಕ್ಕೆ ೫೩ ರನ್‌ಗಳಿಸಿತು. ಅದನ್ನು ಬೆನ್ನಟ್ಟಿದ ತೀತಿರ ತಂಡ ೪ ವಿಕೆಟ್ ನಷ್ಟಕ್ಕೆ ೫೭ ರನ್‌ಗಳಿಸಿ ಮುನ್ನಡೆ ಸಾಧಿಸಿತು. ಬೇಪಡಿಯಂಡ ಮತ್ತು ಮುದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುದ್ದಂಡ ತಂಡ ೧ ವಿಕೆಟ್ ನಷ್ಟಕ್ಕೆ ೭೯ ರನ್‌ಗಳ ಗುರಿ ನೀಡಿತು. ಅದನ್ನು ಬೆನ್ನಟ್ಟಿದ ಬೇಪಡಿಯಂಡ ತಂಡ ೧ ವಿಕೆಟ್ ನಷ್ಟಕ್ಕೆ ೮೨ ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಕೋಚೆರ ಮತ್ತು ಮಾಚಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಚೆರ ತಂಡವು ೨ ವಿಕೆಟ್ ನಷ್ಟಕ್ಕೆ ೯೧ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಮಾಚಂಗಡ ತಂಡವು ೫ ವಿಕೆಟ್ ನಷ್ಟಕ್ಕೆ ೪೯ ರನ್‌ಗಳಿಸಿ ಸೋಲನುಭವಿಸಿತು.

- ಪ್ರಭಾಕರ್