ಭಾಗಮಂಡಲ, ಏ. ೨೪: ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕ್ರಿಕೆಟ್‌ನಲ್ಲಿ ಪರ್ಲಕೋಟಿ ತಳೂರು ಇಳಂದಿಲ ಮತ್ತು ಕುಡೆಕಲ್ಲು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

ಶೇರಮರಕಡ ಮತ್ತು ತಳೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶೇರಮರಕಡ ಏಳು ವಿಕೆಟ್ ನಷ್ಟಕ್ಕೆ ೩೫ ರನ್‌ಗಳಿಸಿತು. ತಳೂರು ತಂಡ ೭.೪ ಓವರ್‌ನಲ್ಲಿ ೩೬ ರನ್‌ಗಳಿಸಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಪರ್ಲಕೋಟಿ ಮತ್ತು ಮೇಲ್ಚೆಂಬು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ಲಕೋಟಿ ತಂಡ ಆರು ವಿಕೆಟ್ ನಷ್ಟಕ್ಕೆ ೬೩ ರನ್ ಗಳಿಸಿದರೆ ಮೇಲ್ಚೆಂಬು ೪೨ ರನ್ ಗಳಿಸಿ ೨೧ ರನ್‌ಗಳ ಸೋಲನ್ನು ಅನುಭವಿಸಿತು. ಕಾಳೆಯಂಡ ಮತ್ತು ಇಳಂದಿಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳೆಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿತು. ಇಳಂದಿಲ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೬೩ ರನ್ ಗಳಿಸಿ ಗೆಲುವು ಸಾಧಿಸಿತು. ಕೆದಂಬಾಡಿ ಮತ್ತು ಕುಡೆಕಲ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆದಂಬಾಡಿ ತಂಡ ಎಂಟು ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿತು. ಕುಡೆಕಲ್ ತಂಡ ೫.೩ ಓವರ್‌ನಲ್ಲಿ ೪೮ ರನ್‌ಗಳಿಸಿ ಜಯಗಳಿಸಿತು.

ತಾ. ೨೫ ರಂದು (ಇಂದು) ಪರ್ಲಕೋಟಿ ಮತ್ತು ತಳೂರು ಇಳಂದಿಲ ಮತ್ತು ಕುಡೆಕಲ್ಲು ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಸೆಮಿ ಫೈನಲ್ಸ್ ಪಂದ್ಯ ೧೦ ಓವರ್‌ಗಳಿಗೆ ನಡೆದರೆ ಫೈನಲ್ ಪಂದ್ಯ ೧೨ ಓವರ್‌ಗಳಿಗೆ ನಡೆಯಲಿದೆ.

ಸಮಾರಂಭದಲ್ಲಿ ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿಕುಮಾರ್ ಅಧ್ಯಕ್ಷತೆ ವಹಿಸುವರು. ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ .ವಿ ರೇಣುಕಾ ಪ್ರಸಾದ್ ,ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕೆದಂಬಾಡಿ ಕುಟುಂಬದ ಪಟ್ಟೆದಾರ ಕೆದಂಬಾಡಿ ಆನಂದ, ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ .ಎಸ್ ಜಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಕ್ರೀಡಾಪಟು ನವನೀತ ಪಟ್ಟೆಮನೆ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು, ಅಂತರರಾಷ್ಟಿçÃಯ ಮೆರಥಾನ್ ಕ್ರೀಡಾಪಟು ಹೊಸೊಕ್ಲು ಚಿನ್ನಪ್ಪ ಉಪಸ್ಥಿತರಿರುವರು.

-ಸುನಿಲ್

ರನ್‌ಗಳಿಸಿ ಜಯಗಳಿಸಿತು.