ಮುಳ್ಳೂರು, ಏ. ೨೪: ಸಮೀಪದ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ವತಿಯಿಂದ ಶನಿವಾರ ವಿಶ್ವ ಭೂಮಿ ದಿನವನ್ನು ಆಚರಿಸ ಲಾಯಿತು.

ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅವರು ಪರಿಸರ ಪ್ರೇಮಿ ಯಾಗಿದ್ದು, ತಾನು ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಜೊತೆಯಲ್ಲಿ ಆಸ್ಪತ್ರೆಗೆ ಜಾಗದಲ್ಲಿ ಮರ-ಗಿಡಗಳನ್ನು ಬೆಳೆಸಿ ಹಸಿರುಮಯಗೊಳಿಸಿದ್ದಾರೆ. ಅವರು ಪ್ರತಿವರ್ಷ ಪರಿಸರ ದಿನವನ್ನು ವಿಶೇಷವಾಗಿ ಆಚರಿಸು ತ್ತಿರುವುದು ವಿಶೇಷವಾಗಿದೆ.

ವಿಶ್ವ ಭೂಮಿ ದಿನದ ಅಂಗ ವಾಗಿ ಶನಿವಾರ ಆಸ್ಪತ್ರೆ ಮುಂಭಾಗದ ಉದ್ಯಾನವನದಲ್ಲಿ ಆಸ್ಪತ್ರೆ ವೈದ್ಯಾಧಿ ಕಾರಿ ಡಾ. ಸುಪರ್ಣ ಕೃಷ್ಣಾನಂದ್ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಭೂ ತಾಯಿಯ ಮಹತ್ವವನ್ನು ಸಾರುವ ವಿಶ್ವ ಭೂಗೋಳ ಹಾಗೂ ಹಕ್ಕಿ ಪಕ್ಷಿಗಳನ್ನು ಸಂರಕ್ಷಿಸುವ ಕುರಿತಾದ ಮಾದರಿಯನ್ನು ಹಿಡಿದುಕೊಂಡು ವಿಶ್ವ ಭೂಮಿ ದಿನವನ್ನು ಆಚರಿಸಿ ದರು. ದಿನದ ಮಹತ್ವ ಕುರಿತು ಮಾತನಾಡಿದ ಡಾ. ಸುಪರ್ಣ, ಭೂಮಿ ತಾಯಿಗೆ ಸಮಾನವಾಗಿದ್ದು ಆಧುನಿಕ, ವೈಜ್ಞಾನಿಕ ಮತ್ತು ಅಭಿವೃದ್ಧಿಯ ಭರದಲ್ಲಿ ನಾವು ಭೂಮಿಯ ಮೇಲೆ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಈ ದಿಸೆಯಲ್ಲಿ ಪರಿಸರದ ಮೇಲಾಗುತ್ತಿರುವ ವಿವಿಧ ರೀತಿಯ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಜಾಗೃತಿ ಹೊಂದಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವಂತೆ ಮನವಿ ಮಾಡಿದರು.