ಭಾಗಮAಡಲ, ಏ. ೨೩: ಸಮೀಪದ ಚೆಟ್ಟಿ ಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆ ಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಭಾನುವಾರದ ಪಂದ್ಯಗಳಲ್ಲಿ ಇಳಂದಿಲ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿದೆ.
ಕೋಡಿ ಮತ್ತು ಕಟ್ಟಕೋಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಡಿ ತಂಡ ೧೦ ವಿಕೆಟ್ ಗಳ ಜಯ ಸಾಧಿಸಿತು. ಬೈಲೊಳಿ ಮತ್ತು ಇಳಂದಿಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಳಂದಿಲ ಜಯ ಸಾಧಿಸಿತು. ಬಿಳಿಯಂಡ್ರ ವಿರುದ್ಧ ತೆಕ್ಕಡೆ ೧೯ ರನ್‌ಗಳ ಜಯ ಸಾಧಿಸಿತು. ಪೊನ್ನಚ್ಚನ ಮತ್ತು ಮುಕ್ಕಾಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊನ್ನಚ್ಚನ ತಂಡ ೧೫ ರನ್‌ಗಳ ಜಯ ಸಾಧಿಸಿತು.
ಕೂರನ ಮತ್ತು ಉರ್ದೊಳಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉರ್ದೊಳಿ ೯ ವಿಕೆಟ್‌ಗಳ ಜಯ ಸಾಧಿಸಿತು. ಇಳಂದಿಲ ಮತ್ತು ಕೋಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಳಂದಿಲ ತಂಡ ೩೭ ರನ್‌ಗಳ ಜಯ ಸಾಧಿಸಿತು. ಪೊನ್ನಚನ ಮತ್ತು ತೆಕ್ಕಡೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೆಕ್ಕಡೆ ತಂಡ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ತಕ್ಕಡೆ ತಂಡದ ವಿರುದ್ಧ ಉರ್ದೊಳಿ ಒಂದು ರನ್‌ಗಳ ಜಯ ಸಾಧಿಸಿತು. ಇಳಂದಿಲ ಮತ್ತು ಉಡುದೋಳಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಳಂದಿಲ ಜಯ ಸಾಧಿಸಿತು. - ಸುನಿಲ್