ವೀರಾಜಪೇಟೆ, ಏ. ೨೩: ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ದೊಡ್ಡಹಬ್ಬ ಶ್ರದ್ದಾಭಕ್ತಿಯಿಂದ ನಡೆಯಿತು.
ಹೆಗ್ಗಳ, ಬೇಟೋಳಿ, ಆರ್ಜಿ ಮೂರು ಗ್ರಾಮಸ್ಥರು ಸೇರಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಅಯ್ಯಪ್ಪ-ಭಗವತಿ ಉತ್ಸವ ತಾ. ೨೨ ರಂದು ದೇವಸ್ಥಾನದಲ್ಲಿ ಪಟ್ಟಣಿ ಉತ್ಸವದೊಂದಿಗೆ ಪ್ರಾರಂಭಗೊAಡು ಇಂದು ದೊಡ್ಡಹಬ್ಬ ನಡೆಯಿತು,
ಎತ್ತು ಪೋರಾಟ, ಬೆಳಿಗ್ಗೆನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ತಾ. ೨೪ ರಂದು ಕುದುರೆ, ತಾ. ೨೫ ಕುಂದಚೂಳೆ, ೨೬ ರಂದು ಶುದ್ಧ ಕಲಶ ನಡೆಯಲಿದೆ.