ಮಡಿಕೇರಿ, ಏ. ೨೩: ಹಿರಿಯ ಸಾಹಿತಿ ಗೌರಮ್ಮ ದತ್ತಿನಿದಿ ಪ್ರಶಸ್ತಿ ಪುರಸ್ಕೃತೆ ದಿನಮಣಿ ಹೇಮರಾಜ್ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ಧಾರವಾಡದಲ್ಲಿ ಪ್ರದಾನ ಮಾಡಲಾಯಿತು.

ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಡಳಬಾಳು ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ರಂಗಾಯಣ ಸಾಂಸ್ಕೃತಿಕ ಸಮುದಾಯ ಸಭಾಭವನದಲ್ಲಿ ರಾಜ್ಯಮಟ್ಟದ ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಸಾಹಿತ್ಯದ ವಿಭಾಗದಲ್ಲಿ ದಿನಮಣಿ ಹೇಮರಾಜ್ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಗಿದೆ.