ಮಡಿಕೇರಿ, ಏ. ೨೨: ಯುವ ಜನಾಂಗ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಅಂತರರಾಷ್ಟಿçÃಯ ಶೂಟಿಂಗ್‌ಪಟು ಕ್ಯಾ. ಸುಬ್ಬಯ್ಯ ಕರೆ ನೀಡಿದರು.

ಐರಿ ಮಕ್ಕಡ ಕೂಟ, ಅರಮೇರಿ ಐರಿ ಸಮಾಜ ವತಿಯಿಂದ ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುತ್ತಿರುವ ೯ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ಯುವ ಜನತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಮುಂದೊAದು ದಿನ ಅಂತರರಾಷ್ಟಿçÃಯ ಪಂದ್ಯಗಳನ್ನು ಆಡುವಂತಾಗಬೇಕು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಜನಾಂಗದ ಅಭಿವೃದ್ಧಿಗೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಎಸಿಎಫ್ ಐರೀರ ಗೋಪಾಲ, ಆರ್.ಎಫ್.ಓ. ಮಾಲೆರ ಚರಣ್, ಐರಿ ಸಮಾಜ ನಿರ್ದೇಶಕಿ ಮುಲೈರಿರ ಹೇಮಾವತಿ, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ಐರಿ ಸಮುದಾಯದ ಕ್ರಿಕೆಟ್ ಕ್ರೀಡಾಕೂಟದ ಜನಕರಾದ ಐರೀರ ಜಾಬು ಪೂಣಚ್ಚ ಮತ್ತು ಅಮ್ಮಣಂಡ ಯು. ಪೂಣಚ್ಚ. ಉಪಸ್ಥಿತರಿದ್ದರು.

ಕ್ರೀಡಾಕೂಟದ ಮೊದಲ ದಿನ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ೧೦ ತಂಡಗಳು ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿವೆ. ತಾ. ೨೩ ರಂದು (ಇಂದು) ಯುವತಿಯರಿಗೆ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ವಿವಿಧ ವಯೋಮಾನದವರಿಗೆ ಆಟೋಟ ಸ್ಪರ್ಧೆಗಳು ನಡೆಯಲಿವೆ.

ಐನ್‌ಮನೆ ಅನಾವರಣ

ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆಗುವ ತಂಡಕ್ಕೆ ನೀಡಲಾಗುವ ಮರದ ಐನ್ ಮನೆ ಮಾದರಿಯ ಪ್ರಶಸ್ತಿಯಲ್ಲಿ ಪಂದ್ಯಾವಳಿ ಉದ್ಘಾಟನೆ ಸಂದರ್ಭ ಅನಾವರಣ ಗೊಳಿಸಲಾಯಿತು. ಕರಕುಶಲಕರ್ಮಿ ಯನಂಗಡ ವಾಸು ಉದಯ್ ರಚನೆ ಮಾಡಿರುವ ಐನ್ ಮನೆ ಇಡೀ ಸಮಾರಂಭದ ಆಕರ್ಷಣೆಯಾಗಿತ್ತು.