ಮಡಿಕೇರಿ, ಏ. ೨೨: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨ನೇ ವರ್ಷದ ಪಾಣತ್ತಲೆ ಫುಟ್‌ಬಾಲ್ ಕಪ್‌ಗೆ ಚಾಲನೆ ನೀಡಲಾಯಿತು.
ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾಟಕ್ಕೆ ಅಂತರರಾಷ್ಟಿçÃಯ ಮ್ಯಾರಥಾನ್ ಓಟಗಾರ ಹೊಸೊಕ್ಲು ಚಿಣ್ಣಪ್ಪ ಚಾಲನೆ ನೀಡಿದರೆ, ಸಭಾ ಕಾರ್ಯಕ್ರಮವನ್ನು ಬಿಎಸ್‌ಎನ್‌ಎಲ್ ನಿವೃತ್ತ ಇಂಜಿನಿಯರ್ ಪಾಣತ್ತಲೆ ಪೊನ್ನಪ್ಪ ಉದ್ಘಾಟಿಸಿದರು.
ಪಾಣತ್ತಲೆ ಕ್ರೀಡಾ ಸಮಿತಿ ಅಧ್ಯಕ್ಷ ಪಾಣತ್ತಲೆ ಜಗದೀಶ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮರಗೋಡು ಗ್ರಾ.ಪಂ. ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮ, ಮರಗೋಡು ಸರಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕೆದಂಬಾಡಿ ಶೈಲಾ, ಕಾಫಿ ಬೆಳೆಗಾರ ಪಾಣತ್ತಲೆ ನಂಜಪ್ಪ, ಪಾಣತ್ತಲೆ ದೇವಯ್ಯ, ಚರಂಡೇಟಿ ಅಯ್ಯಪ್ಪ ಸಂಘದ ಉಪಾಧ್ಯಕ್ಷ ಪಾಣತ್ತಲೆ ಸತ್ಯ ವಿಶ್ವನಾಥ್, ಕಟ್ಟೆಮಾಡು ಮೀನಾ ರಾಮಚಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು. ಕಟ್ಟೆಮನೆ ಸೋನಾಜಿತ್ ನಿರೂಪಿಸಿ, ಪಾಣತ್ತಲೆ ರಾಯ್ ಚಿಣ್ಣಪ್ಪ ಸ್ವಾಗತಿಸಿ, ಪ್ರಮೀಳಾ ಪೊನ್ನಪ್ಪ ವಂದಿಸಿದರು. ಪರಿಚನ ಸತೀಶ್, ಸೋನಾಜಿತ್ ವೀಕ್ಷಕ ವಿವರಣೆ ನೀಡಿದರು.
ಫಲಿತಾಂಶ: ದಿನದ ಮೊದಲ ಪಂದ್ಯದಲ್ಲಿ ಮುಕ್ಕಾಟಿ, ಚಂಡಿರ, ಕೊಳಂಬೆ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ಗೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡರೆ, ಮಂಞAಡ್ರ ಮುಂದಿನ ಹಂತಕ್ಕೆ ಪ್ರವೇಶಿಸಿತು.
೦-೨ ಅಂತರದಲ್ಲಿ ಮುಕ್ಕಾಟಿ ತಂಡವು ಹೊಸೊಕ್ಲು ತಂಡವನ್ನು ಪರಾಭವಗೊಳಿಸಿತು. ಕಲ್ಲೇರಮ್ಮನ ಕೊಳಂಬೆ ವಿರುದ್ಧ ೦-೨ ಗೋಲುಗಳಲ್ಲಿ ಸೋಲು ಅನುಭವಿಸಿತು. ದಂಬೆಕೋಡಿ ಹಾಗೂ ಉರ್ದೋಳಿ ನಡುವಿನ ಪಂದ್ಯಾಟದಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸದ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ೨-೦ ಅಂತರದಲ್ಲಿ ದಂಬೆಕೋಡಿ ಗೆಲುವಿನ ನಗೆ ಬೀರಿತು.
ಕೋಡಿ ಗೈರಿನಿಂದ ನಿಡ್ಯಮಲೆ ಸುಲಭ ಜಯ ಸಾಧಿಸಿತು. ೧-೦ ಗೋಲುಗಳ ಅಂತರದಲ್ಲಿ ದಂಬೆಕೋಡಿ
(ಮೊದಲ ಪುಟದಿಂದ) ವಿರುದ್ಧ ಕೊಳಂಬೆ ಜಯ ತನ್ನದಾಗಿಸಿಕೊಂಡಿತು.
೦-೨ ಗೋಲುಗಳ ಅಂತರದಲ್ಲಿ ಉಳುವಾರನ ವಿರುದ್ಧ ಹೊಸೊಕ್ಲು ಜಯ ಗಳಿಸಿದರೆ, ನಿಡ್ಯಮಲೆ ವಿರುದ್ಧ ೨-೧ ಗೋಲುಗಳ ಅಂತರದಲ್ಲಿ ಚಂಡಿರ ಗೆಲುವು ಸಾಧಿಸಿತು. ಚಂಡಿರ ಹಾಗೂ ತೆಕ್ಕಡೆ ನಡುವಿನ ಪಂದ್ಯಾಟದಲ್ಲಿ ಯಾವುದೇ ಗೋಲು ದಾಖಲಾಗದ ಹಿನ್ನೆಲೆ ಪೆನಾಲ್ಟಿ ಶೂಟೌಟ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಚಂಡಿರ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು.