ಮಡಿಕೇರಿ, ಏ. ೨೨: ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ಈದುಲ್ ಫಿತರ್ ಎಂಬ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಮುಖ್ಯ ಮಸೀದಿಗಳಾದ ಜಾಮಿಯಾ, ಬದ್ರಿಯಾ, ಭಟ್ಕಳ, ಎಂ.ಎA ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ಬೆಳಿಗ್ಗೆ ಹಬ್ಬದ ವಿಶೇಷ ನಮಾಜ್ ನೆರವೇರಿತು.
ಒಂದು ತಿಂಗಳಿನಿAದ ಉಪವಾಸ ವ್ರತಾಚರಣೆಯಲ್ಲಿ ತೊಡಗಿಸಿ ಕೊಂಡಿದ್ದವರು ಹಬ್ಬದ ಪ್ರಧಾನ ಸಂಕೇತವಾದ ಫಿತರ್ ಝಕಾತ್ ಎಂಬ ಧಾನ್ಯದಾನವನ್ನು ಮಾಡಿದರು. ಜಾಮಿಯಾ ಮಸೀದಿ ಹಾಗೂ ಬದ್ರಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ‘‘ಅಲ್ಲಾಹು ಅಕ್ಬರ್’’ ಎಂಬ ದೈವಕೀರ್ತನೆ ಯೊಂದಿಗೆ ಮೆರವಣಿಗೆ ಸಾಗಿತು. ಬದ್ರಿಯಾ ಮಸೀದಿಯಲ್ಲಿ ಹಫೀಜ್ ಫಜಲುಲ್ರ‍್ರಹ್ಮಾನ್ ಅವರು ಧಾರ್ಮಿಕ ಪ್ರವಚನ ನೀಡಿದರು. ಈದ್ಗಾ ಮೈದಾನದಲ್ಲಿ ಜಾಮಿಯಾ ಮಸೀದಿ ಧರ್ಮಗುರುಗಳಾದ ಉಬೈದು ರ‍್ರಹಮಾನ್ ಚಿಸ್ತಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಖಬರಸ್ಥಾನದಲ್ಲಿ ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಕೋರಲಾಯಿತು.
ವೀರಾಜಪೇಟೆ: ನಗರದ ವಿವಿಧ ಮಸೀದಿ ಈದ್‌ಗಾಹ್‌ಗಳಲ್ಲಿ ವಿಶೇಷ ಈದ್ ನಮಾಝ್ ಹಾಗೂ ಪ್ರವಚನ ನಡೆಯಿತು.
ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ||. ರವೂಫ್ ಹುದವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಮೌ||.ಅಬ್ದುಲ್ಲಾ ಉಸ್ತಾದ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಮ್‌ನಲ್ಲಿ ಮೌ||.ಹಸೀಬ್ ಶರೀಫ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ||.ಮುಝಮ್ಮಿಲ್, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಮಸೀದಿಯಲ್ಲಿ ಮೌ||.ಮಖ್ಸೂದ್ ಅಹಮದ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ||.ಗುಲ್ಶದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ||.ಮುತ್ತಲಿಬ್ ಅನ್ವರಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ನೀಡಿದರು.
ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೆöÊಟ್ ಕ್ಯಾಂಪಸ್ ಈದ್‌ಗಾಹ್‌ನಲ್ಲಿ ಮೌ||.ಮುಹಮ್ಮದ್ ಫಾಸಿಲ್ ಉಳಿಯಿಲ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್‌ಗಾಹ್‌ನಲ್ಲಿ ಮೌ||. ಸನೋಫರ್ ಮೌಲವಿಯÀವರು ಪ್ರವಚನ ನೀಡಿದರು. ಈದ್‌ಗಾಹ್‌ಗಳಲ್ಲಿ
(ಮೊದಲ ಪುಟದಿಂದ) ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಮಾಝ್‌ನಂತರ ಸಮುದಾಯ ಬಾಂಧವರು ಪರಸ್ಪರ ಶುಭಾಶಯವನ್ನು ಹಂಚಿ ಮೆರವಣಿಗೆಯಲ್ಲಿ ತರಳಿ ಖಬರಸ್ಥಾನದಲ್ಲಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು. ಹನಫಿ ಹಾಗೂ ಶಾಫಿ ವಿಭಾಗದವರು ಒಂದೇ ದಿನ ಹಬ್ಬ ಆಚರಿಸಿದುದು ವಿಶೇಷವಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕೂಡಿಗೆ: ಕೂಡಿಗೆಯ ಜುಮಾ ಮೊಹಿದೀನ್ ಮಸೀದಿಯಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಸಮುದಾಯದ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಅಮೀರ್ ಅಲಿಸ್, ಕಾರ್ಯದರ್ಶಿ ನೌಫಲ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ ಪಿ ಹಮೀದ್, ಸಮುದಾಯದ ಪ್ರಮುಖರಾದ ಶಾಫಿ, ಮಹಮ್ಮದ್, ಖಾದರ್, ರಜಾಕ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಕೂಡಿಗೆ , ಕೂಡುಮಂಗಳೂರು ಕಣಿವೆಯ ಸಮುದಾಯದ ಬಾಂಧವರು ಭಾಗವಹಿಸಿದರು.
ಕಡಂಗ: ಸಮೀಪದ ಕಡಂಗ ಬದ್ರಿಯ ಮಸೀದಿಯಲ್ಲಿ ಜಮಹತ್ ಖತೀಬ್ ಸಹಜನ್ ಸಖಾಫಿ ನೇತೃತ್ವದಲ್ಲಿ ನಮಾಜ್ ನಡೆಯಿತು. ನಮಾಜ್ ನಂತರ ಸಮೀಪದ ಮುಹ್ಯದ್ದೀನ್ ಮಸೀದಿಯಲ್ಲಿ ಸಲೀಂ ಫೈಜಿ ಉಸ್ತಾದರ ನೇತೃತ್ವದಲ್ಲಿ ನಮಾಜ್ ಮತ್ತು ಪ್ರಾರ್ಥನೆ ನೆರವೇರಿತು. ಸಹಸ್ರ ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇಶದ ಒಳಿತಿಗಾಗಿ ಪ್ರಾರ್ಥನೆ ನಡೆಸಲಾಯಿತು.ಚೆಯ್ಯಂಡಾಣೆ: ಮುಸ್ಲಿಂರ ಪವಿತ್ರ ಹಬ್ಬ ಈದುಲ್ ಫಿತರ್ ಅನ್ನು ಎಡಪಾಲದ ಮುಸಲ್ಮಾನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಿಗ್ಗೆ ೮.೩೦ ಗಂಟೆಗೆ ಮಹಲ್ ಖತೀಬ್ ನಿಝರ್ ಫೈಝಿ ಸಾಮೂಹಿಕ ಈದ್ ನಮಾಜ್ ಹಾಗೂ ದುಆಕ್ಕೆ ನೇತೃತ್ವ ವಹಿಸಿದರು. ನಂತರ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಅಲಿಂಗನ ಮಾಡುದರ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಪೊನ್ನAಪೇಟೆ: ರಂಜಾನ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಲೋಕದ ಒಳಿತಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ತಮ್ಮ ಸಮುದಾಯದ ಸ್ಮಶಾನಕ್ಕೆ ತೆರಳಿ ಇಹಲೋಕವನ್ನು ತ್ಯಜಿಸಿರುವ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು.
ಮನುಕುಲಕ್ಕೆ ಶಾಂತಿ ಸೌಹಾರ್ದತೆಯ ಸಂದೇಶ ನೀಡಲಾಯಿತು. ಈ ಸಂದರ್ಭ ಮಸೀದಿ ಅಧ್ಯಕ್ಷ ಅಹಮದ್, ಕಾರ್ಯದರ್ಶಿ ಬಿ.ಎ.ಅಜೀಜ್, ಉಪಾಧ್ಯಕ್ಷ ಸಿ.ಎಂ.ಆಶ್ರಫ್, ಪದಾಧಿಕಾರಿಗಳು, ಪೊನ್ನಂಪೇಟೆ ಗ್ರಾ.ಪಂ.ಸದಸ್ಯ ಸಿ.ಎ.ಜುನೈದ್ ಇನ್ನಿತರರು ಇದ್ದರು. ಕಾಟ್ರಕೊಲ್ಲಿ ಹಾಗೂ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿರುವ ಮಸೀದಿಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆದವು.
ಕಣಿವೆ : ಕುಶಾಲನಗರ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮುಸಲ್ಮಾನ ಬಾಂಧವರು ತಮ್ಮ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಶನಿವಾg ಶ್ರದ್ಧಾಭಕ್ತಿಯಿಂದ ಆಚರಿಸಿದರು.
ವಿವಿಧ ಪ್ರಾರ್ಥನಾಲಯಗಳಲ್ಲಿ ರಂಜಾನ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಪ್ರವಚನ ನಡೆಯಿತು.
ಕುಶಾಲನಗರ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ನೂರಾರು ಸಂಖ್ಯೆಯ ಮುಸಲ್ಮಾನ ಬಾಂಧವರು ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ಮೆರವಣಿಗೆಯಲ್ಲಿ ಕುಶಾಲನಗರದಿಂದ ಗಂಧದಕೋಟಿ ಬಳಿಯಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಹಾಗೆಯೇ ಅಬಾಲವೃದ್ಧರಾದಿಯಾಗಿ ಪರಸ್ಪರ ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಜಾಮಿಯ ಮಸೀದಿಯ ಧರ್ಮಗುರುಗಳಾದ ಹಿಮಾಮ್ ರಶೀದ್ ಅಹಮ್ಮದ್ ವಿಶೇಷ ಪ್ರವಚನ ನೀಡಿದರು. ಮಸೀದಿ ಸಮಿತಿ ಪ್ರಮುಖರಾದ ಮೆಹತಾಬ್ ಅಹಮ್ಮದ್, ರಫೀಕ್ ಅಹಮ್ಮದ್ ಸೇರಿದಂತೆ ಪದಾಧಿಕಾರಿಗಳು ಇದ್ದರು.ಸಿದ್ದಾಪುರ : ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು. ಸಮುದಾಯದ ಎಲ್ಲಾ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಕAಡಕೆರೆ
ಚೆಟ್ಟಳ್ಳಿ : ಕಂಡಕರೆ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಹಬ್ಬ ಆಚರಿಸಲಾ ಯಿತು. ಮಸೀದಿ ಖತಿಬರಾದ ಮುಸ್ತಫಾ ಸಖಾಫಿ ನೇತೃತ್ವ ನೀಡಿ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಗಫೂರ್ ಮತ್ತು ಕಾರ್ಯದರ್ಶಿ ಮಹಮ್ಮದ್ ರಫಿ ಉಪಸ್ಥಿತರಿದ್ದರು. ಮುಸ್ಲಿಂ ಬಾಂಧವರು ಸಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿAದ ಆಚರಿಸಿದರು.
ಹಬ್ಬದ ಅಂಗವಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಖಬರಸ್ಥಾನಗಳಿಗೆ ತೆರಳಿ ಅಗಲಿದವರ ಆತ್ಮಶಾಂತಿಗೆ ಪ್ರಾರ್ಥಿಸಲಾಯಿತು.
ರಂಜಾನ್ ಅಂಗವಾಗಿ ಸಮುದಾಯದ ಬಡ ಕುಟುಂಬಗಳಿಗೆ ಧವಸ, ಧಾನ್ಯ, ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡಿರುವ ಝಕಾತ್‌ಗಳನ್ನು ನೀಡಲಾಯಿತು. ಸಮುದಾಯದ ಸಂಘಟನೆಗಳು, ಸ್ಥಳೀಯ ಮಸೀದಿಗಳ ಆಡಳಿತ ಮಂಡಳಿ ವತಿಯಿಂದ ಝಕಾತ್‌ಗಳನ್ನು ಮನೆಮನೆಗಳಿಗೆ ವಿತರಿಸಲಾಯಿತು.
ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ ಧರ್ಮಗುರು ಅಬ್ದುಲ್ ಅಜೀಜ್ ಸಖಾಫಿ, ಬಜೆಗುಂಡಿ ಖಿಳಾರಿಯಾ ಮಸೀದಿಯ ಉಬೈದ್ ಫೈಝಿ, ತಣ್ಣೀರುಹಳ್ಳ ಮಸೀದಿಯ ಸಂಶುದ್ದೀನ್ ಸಹದಿ, ಕಲ್ಕಂದೂರು ಮಸೀದಿಯ ಹಸೈನಾರ್ ಮದನಿ, ತಾಜುದ್ದೀನ್ ಪಾಲಳಿ ಅವರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು.
ಇದರೊಂದಿಗೆ ಪಟ್ಟಣದ ಹನಫಿ ಜಾಮಿಯಾ ಮಸೀದಿ, ಕಾಗಡಿಕಟ್ಟೆ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು. ಹೊಸತೋಟ ಸಮೀಪದ ಬಟಕನಹಳ್ಳಿ ಜಾಮಿಯಾ ಮಸೀದಿಯಲ್ಲಿ ಸಿದ್ದಿಕ್ ಝಹ್ರಿ ನೇತೃತ್ವದಲ್ಲಿ ಈದ್ ನಮಾಜ್ ನೆರವೇರಿತು. ನಂತರ ಮಾತನಾಡಿ, ಸಮಾಜದಲ್ಲಿ ಶಿಸ್ತು ಪಾಲಿಸುವ ಮೂಲಕ ಅಕ್ರಮ ಚಟುವಟಿಕೆಗಳಿಂದ ದೂರವಿರಬೇಕು. ಗಾಂಜಾ ಸೇರಿದಂತೆ ಇನ್ನಿತರ ವ್ಯಸನಗಳಿಂದ ಮುಕ್ತವಾಗಿರುವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಜಮಾತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಪ್ರಧಾನ ಕಾರ್ಯದರ್ಶಿ ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಅಂಗವಾಗಿ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಸಡಗರ ಸಂಭ್ರಮದಿAದ ಆಚರಿಸಿದರು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಮುಸ್ಲಿಯರ್ ಸೈಯದ್ ಆಲವಿ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್ , ಸುನ್ನಿ ಶಾಫಿ ಜಮಾಅತ್ ಮುಸ್ಲಿಯರ್ ಹಮೀದ್ ದರ‍್ಮಿ, ಕೂÀಬ್ಬ ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಒಸಾಮ ಸಖಾಫಿ, ಅವರುಗಳು ಧಾರ್ಮಿಕ ಪ್ರವಚ ಪ್ರಾರ್ಥನೆಯನ್ನು ಸಲ್ಲಿಸಿದರು. ಈದ್ಗಾಗಳಿಗೆ ಮೃತರಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಯಿತು.
ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‌ಉಲ್ ಪಿತ್ತರ್ ಅಂಗವಾಗಿ ನಿಶಾದ್‌ಸೊಲಾಯಿ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದ್ದರು.
ಶನಿವಾರಸಂತೆ : ರಂಜಾನ್ ಹಬ್ಬವನ್ನು ಶನಿವಾರಸಂತೆ ಹನಫಿ ಜಾಮಿಯಾ ಮಸೀದಿ ವತಿಯಿಂದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿAದ ಆಚರಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಪಟ್ಟಣದ ಹನಫಿ ಜಾಮಿಯಾ ಮಸೀದಿಯಿಂದ ಕೆಆರ್‌ಸಿ ವೃತ್ತದಲ್ಲಿರುವ ಈದ್ಗಾ ಮೈದಾನದವರೆಗೆ ಮೆರವಣಿಗೆಯಲ್ಲಿ ತೆರಳಿ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥಿಸಿದರು. ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.