ಮಡಿಕೇರಿ, ಏ. ೧೯: ನಾಕೂರು-ಶಿರಂಗಾಲ ಗ್ರಾಮದ ಶ್ರೀ ಈಶ್ವರ (ಗಂಗಾಧರೇಶ್ವರ), ಶ್ರೀ ಮಹಾ ಗಣಪತಿ, ಶ್ರೀ ದುರ್ಗಾದೇವಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಗ್ರಾಮ ದೇವತೆ ಮತ್ತು ಶ್ರೀ ಬೆಳ್ಳಾರಿಕಮ್ಮ, ಶ್ರೀ ಮಾಸ್ತಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ದೇವರುಗಳ ವಾರ್ಷಿಕ ಮಹಾ ಪೂಜೆ ತಾ. ೨೦ ರಿಂದ (ಇಂದಿನಿAದ) ತಾ. ೨೬ ರವರೆಗೆ ಸಹ ಪರಿವಾರ ದೇವತಾ ಸಹಿತ ಗಂಗಾಧರೇಶ್ವರ ಸ್ವಾಮಿಯ ವಾರ್ಷಿಕ ಉತ್ಸವ ಆರಂಭಗೊಳ್ಳಲಿದೆ.

ತಾ. ೨೦ ರಂದು ಬೆಳಿಗ್ಗೆ ೯ ಗಂಟೆಗೆ ಗ್ರಾಮ ದೇವತೆ ಪೂಜೆ, ಹರಕೆ ಸಲ್ಲಿಸುವವರು ಬೆಳಿಗ್ಗೆ ೯ ಗಂಟೆಗೆ ಹರಕೆಯೊಂದಿಗೆ ಗ್ರಾಮ ದೇವತೆ ವಠಾರದಲ್ಲಿ ಉಪಸ್ಥಿತರಿರಬೇಕು. ಅಪರಾಹ್ನ ೨ ಗಂಟೆಗೆ ಹರಕೆ ಪ್ರಸಾದ ವಿತರಣೆ. ತಾ. ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳ್ಳಾರಿಕಮ್ಮ ದೇವರ ಪೂಜೆ ಪ್ರಸಾದ ವಿನಿಯೋಗ ನೆರವೇರಲಿದೆ.

ತಾ. ೨೨ ರಂದು ಸಂಜೆ ೪ ಗಂಟೆಯಿAದ ಹಸಿರು ವಾಣಿ ಉಗ್ರಾಣ ಮುಹೂರ್ತ ಅಂದಿ ಉತ್ಸವ, ದೇವರ ಚೋಚಂಬಲಿ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. ತಾ. ೨೩ ರಂದು ಬೆಳಿಗ್ಗೆ ದೇವರ ನೃತ್ಯಬಲಿ, ದೇವರ ಪೂಜೆ, ಗಣಹೋಮ, ಏಕದಶ, ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ ನೆರಪುಬಲಿ ಸಂಜೆ ೬.೩೦ಕ್ಕೆ ದುರ್ಗಾದೇವಿ ಪೂಜೆ, ರಾತ್ರಿ ೭.೩೦ಕ್ಕೆ ರಂಗಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೨೪ ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ಸಂಜೆ ೪ ಗಂಟೆಗೆ ಜಳಕ (ಗಂಗಾ ಅವೆಭೃತ ಸ್ನಾನ), ೫ ಗಂಟೆಗೆ ಮಾಸ್ತಿಯಮ್ಮ ದೇವರ ಪೂಜೆ, ಸಂಜೆ ೭.೩೦ ಗಂಟೆಗೆ ದೇವರ ನೃತ್ಯಬಲಿ, ಶುದ್ಧಕಲಶಾಭಿಷೇಕ, ಮಹಾಪೂಜೆ ಮಂತ್ರಾಕ್ಷತೆ, ರಾತ್ರಿ ಅನ್ನಸಂತರ್ಪಣೆ ನೆರವೇರಲಿದೆ.

ತಾ. ೨೫ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ದಂಡಿನ ಮಾರಿಯಮ್ಮ ದೇವರ ವಾರ್ಷಿಕ ಮಹಾಪೂಜೆ, ೧೨ ಗಂಟೆಗೆ ಶ್ರೀ ಮಾರಿಯಮ್ಮ ದೇವರ ಉತ್ಸವ ಹೊರಡುವುದು, ಅಪರಾಹ್ನ ಗಂಗಾ ಸ್ನಾನ, ಅನ್ನಸಂತರ್ಪಣೆ ನಡೆಯಲಿದೆ. ತಾ. ೨೬ ರಂದು ಬೆಳಿಗ್ಗೆ ೪ ಗಂಟೆಗೆ ಶ್ರೀ ದಂಡಿನ ಮಾರಿಯಮ್ಮ ದೇವರಿಗೆ ಹರಕೆ ಪೂಜೆ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.