ಭಾಗಮಂಡಲ, ಏ. ೧೯: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಬುಧವಾರದ ಪಂದ್ಯಗಳಲ್ಲಿ ಮೇಲ್‌ಚೆಂಬು ಮತ್ತು ಪರ್ಲಕೋಟಿ ತಂಡಗಳು ಕ್ವಾಟರ್ ಫೈನಲ್ ಪ್ರವೇಶಿಸಿದವು.
ದಿನದ ಮೊದಲ ಪಂದ್ಯದಲ್ಲಿ ಪಾರೆಮಜಲು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೧೦೧ ರನ್ ಗಳಿಸಿತು. ಉತ್ತರವಾಗಿ ಆಡಿದ ಪಾಂಡಿ ತಂಡ ಐದು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿ ಸೋಲನ್ನು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ಪರ್ಲಕೋಟಿ ವಿರುದ್ಧ ೩೪ ರನ್ ಮಾಡಿತು. ಪರ್ಲಕೋಟಿ ತಂಡ ೩ ಓವರ್‌ಗೆ ೩೫ ರನ್ ಮಾಡಿ ಜಯಗಳಿಸಿತು. ಕೂಡಕಂಡಿ ಮತ್ತು ಪಾರೆಮಜಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾರೆಮಜಲು ತಂಡ ೯೪ ರನ್ ಗಳಿಸಿದರೆ, ಕೂಡಕಂಡಿ ತಂಡ ೫ ವಿಕೆಟ್‌ಗೆ ೫೭ ರನ್ ಗಳಿಸಿ ೩೭ ರನ್‌ಗಳ ಅಂತರದಿAದ ಸೋಲನ್ನುಭವಿಸಿತು. ಪಾರೆಮಜಲು ಮತ್ತು ಪರ್ಲಕೋಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ಲಕೋಟಿ ತಂಡ ೫೪ ರನ್ ಗಳಿಸಿತು. ಪಾರೆಮಜಲು ತಂಡ ನಾಲ್ಕು ವಿಕೆಟ್‌ಗೆ ೨೨ ರನ್ ಗಳಿಸಿ ಸೋಲನ್ನು ಅನುಭವಿಸಿತು. ಮೇಲ್‌ಚೆಂಬು ಮತ್ತು ಕುದುಪಜೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುದುಪಜೆ ೪೨ ರನ್ ಗಳಿಸಿತು. ಮೇಲ್‌ಚೆಂಬು ತಂಡ ಮೂರು ಓವರ್‌ನಲ್ಲಿ ಗುರಿ ಸಾಧಿಸಿತು. ಮೇಲ್‌ಚೆಂಬು ಮತ್ತು ಉಳುವಾರನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಲ್‌ಚೆಂಬು ತಂಡ ೬೭ ರನ್ ಗಳಿಸಿತು. ಉತ್ತರವಾಗಿ ಆಡಿದ ಉಳುವಾರನ ತಂಡ ೫೬ ರನ್ ಮಾಡಿ ಸೋಲನ್ನು ಅನುಭವಿಸಿತು.
- ಸುನಿಲ್