ಸಿದ್ದಾಪುರ, ಏ ೧೮: ಸಿದ್ದಾಪುರ ಕಂಬೀರAಡ ಎ. ನಂಜಪ್ಪ ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ತಾ. ೧೯ ರಂದು (ಇಂದು) ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತಾ. ೧೯ ರಂದು (ಇಂದು) ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಬಿಂಬ ಶುದ್ಧಿ, ಶುದ್ಧ ಕಲಶ, ಬೆಳಿಗ್ಗೆ ೭.೩೦ಕ್ಕೆ ಉಷಾ ಪೂಜೆ, ಬೆಳಿಗ್ಗೆ ೯ ಗಂಟೆಗೆ ಚಂಡಿಕಾಯಾಗ, ೯.೩೦ಕ್ಕೆ ಭಂಡಾರ ತರುವುದು, ಮಧ್ಯಾಹ್ನ ೧ ಗಂಟೆಗೆ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ಸಂಜೆ ೬ ಗಂಟೆಗೆ ತಾಯಂಬಕ, ಕೇರಳದ ಪ್ರಸಿದ್ಧ ಚಂಡೆಯವರಿAದ ನಂತರ ರಾತ್ರಿ ೭.೩೦ಕ್ಕೆ ಭಾರತೀಯ ನೃತ್ಯ ಶಾಲಾ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ. ನಂತರ ಶ್ರೀ ಚಾಮುಂಡೇಶ್ವರಿ ದೇವರ ಪ್ರಸಾದ ವಿತರಣೆ, ಸಿಡಿಮದ್ದು ಪ್ರದರ್ಶನ, ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.