ಕೂಡಿಗೆ, ಏ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಮತ್ತು ಹಾರಂಗಿ ನದಿ ಸೇರುವ ಸ್ಥಳದ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೂಡಿಗೆ ಗ್ರಾಮದ ಹಾಸನ ಹೆದ್ದಾರಿಯ ರಸ್ತೆಯಿಂದ ೧ ಕಿಲೋ ಮೀಟರ್ ದೂರದಲ್ಲಿರುವ ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಸ್ಥಳಕ್ಕೆ ತೆರಳಲು ಸಮರ್ಪಕವಾದ ರಸ್ತೆ, ಪ್ರವಾಸಿಗರು ಭೇಟಿ ನೀಡಿ ಸಂಗಮ ಸ್ಥಳದಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತಹ ವ್ಯವಸ್ಥೆ ಹಾಗೂ ಪ್ರವಾಸಿಗರು ಮತ್ತು ಯಾತ್ರಿಕರು ಸಂಗಮ ವೀಕ್ಷಣೆಗೆ ಅನುಕೂಲವಾಗುವಂತೆ ಜಿಲ್ಲೆಯ ಜಿಲ್ಲಾಡಳಿತದ ವತಿಯಿಂದ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಪವಿತ್ರ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆಯ ಮಟ್ಟ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯ ಅಣೆಕಟ್ಟೆಯಿಂದ ನದಿಗೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹರಿಸಲಾಗಿದೆ. ಅಲ್ಲದೆ ಹೊರ ರಾಜ್ಯದಿಂದ ಬಂದ ಯಾತ್ರಿಕರಿಗೆ ಜಿಲ್ಲೆಯ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಗಂಗಾ ಪೂಜೆಯನ್ನು ನೆರವೇರಿಸುವ ಪದ್ಧತಿಯಾದರೂ ಸಹ ಸಂಗಮ ಸ್ಥಳಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದೆ, ಕಾವೇರಿ-ಹಾರಂಗಿ ನದಿಯ ಸಂಗಮದ ಸ್ಥಳದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ತಪ್ಪಿದಂತೆ ಆಗುತ್ತಿದೆ ಎನ್ನುತ್ತಾರೆ ತಮಿಳುನಾಡಿನ ಯಾತ್ರಿಕ ತಂಡದವರು.
ಇದಕ್ಕೆ ಸಂಬAಧಿಸಿದAತೆ ಅನೇಕ ಬಾರಿ ಕೂಡಿಗೆ ಗ್ರಾಮಸ್ಥರು ದಾರಿ ಮತ್ತು ಸಂಗಮದ ವ್ಯವಸ್ಥೆಯನ್ನು ಸರಿಪಡಿಸಲು ಮನವಿಯನ್ನು ಸಂಬAಧಿಸಿದAತೆ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ. ಜಿಲ್ಲೆಗೆ ಈಗಾಗಲೇ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಬAಧಿಸಿದ ಅಧಿಕಾರಿ ವರ್ಗದವರು ಪ್ರವಾಸಿ ತಾಣಗಳು ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಮಳೆಗಾಲದಲ್ಲಿ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಸಂಗಮದ ದೃಶ್ಯ ವೀಕ್ಷಣೆ ಮಾಡಲು ಸಹ ಅನುಕೂಲ ದೃಷ್ಟಿಯಿಂದ ಸಂಬAಧಿಸಿದ ಇಲಾಖೆಯವರು ಗಮನ ಹರಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ