ಮಡಿಕೇರಿ, ಏ. ೧೬: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ-೪ ಯೋಜನೆ ಅಡಿಯಲ್ಲಿ ಬಸವೇಶ್ವರ ರಸ್ತೆಗೆ ಹೊಂದಿಕೊAಡAತೆ ಅಶೋಕ ರಸ್ತೆಯಲ್ಲಿ ಚರಂಡಿ ನಿರ್ಮಾಣ ಹಾಗೂ ಸೋಮೇಶ್ವರ ದೇವಸ್ಥಾನ ರಸ್ತೆಯಲ್ಲಿ ಇತ್ತೀಚೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸೋಮವಾರಪೇಟೆ ಪ.ಪಂ.ಮುಖ್ಯಾಧಿಕಾರಿ ಅವರು ಸ್ಥಳ ಪರಿಶೀಲಿಸಿದ್ದಾರೆ.

ಬಸವೇಶ್ವರ ರಸ್ತೆಗೆ ಹೊಂದಿಕೊAಡAತೆ ಹಳೆಯದಾದ ಹಾಗೂ ಹಾನಿಗೊಳಗಾದ ಕಲ್ಲಿನ ಚರಂಡಿ ಇದ್ದು, ಈಗಾಗಲೇ ಅನುಮೋದಿತ ಕ್ರಿಯಾ ಯೋಜನೆಯಂತೆ ಹಳೆಯ ಹಾನಿಗೊಳಗಾದ ಚರಂಡಿಯನ್ನು ತೆರವುಗೊಳಿಸಿ, ಹೊಸ ಚರಂಡಿಯನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಕಾಮಗಾರಿಯು ಪ್ರಗತಿಯಲ್ಲಿದ್ದು, ರಸ್ತೆಯ ನೀರು ಚರಂಡಿಗೆ ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, ೨೦೨೧ ನೇ ಸಾಲಿನಲ್ಲಿಯೇ ೨೧೪೯.೨ ಮಿ.ಮೀ.ಗಳ ಮಳೆಯಾಗಿತ್ತು. ಈ ರೀತಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾದಾಗ ಹಾಗೂ ಸೋಮೇಶ್ವರ ದೇವಸ್ಥಾನದ ಕಾಂಕ್ರೀಟ್ ರಸ್ತೆಯು ಮುಖ್ಯರಸ್ತೆಯಾಗಿರುವುದರಿಂದ, ಕಾಂಕ್ರೀಟ್ ರಸ್ತೆಯ ಮೇಲ್ಪದರ ಮಾತ್ರ ಹಾನಿಗೊಳಗಾಗಿದೆ. ಆದರೆ, ಕಾಂಕ್ರೀಟ್ ರಸ್ತೆ ಪೂರ್ಣ ಹಾಳಾಗಿರುವುದಿಲ್ಲ. ರಸ್ತೆಯ ಮೇಲ್ಮೆöÊ ಹಾನಿ ಆಗಿರುವುದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ರಸ್ತೆಯ ಮೇಲ್ಮೆöÊ ಪದರದ ಒರಟುತನ ಇರುವುದರಿಂದ ಅಸ್ಪಾಲ್ಟ್ ರಸ್ತೆಯನ್ನು ಮಾಡಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಈ ಕಾಮಗಾರಿಯನ್ನು ನಗರೋತ್ಥಾನ ಹಂತ-೪ ರಲ್ಲಿ ಮಂಜೂರಾದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಲಾಗಿದ್ದು, ಹಾಲಿ ಅಸ್ಪಾಲ್ಟ್ ರಸ್ತೆಯನ್ನು ಗಟ್ಟಿತನವಿರುವ ಸಿ.ಸಿ.ರಸ್ತೆಯ ಮೇಲೆ ನಿರ್ಮಿಸಿರುವುದರಿಂದ ಭವಿಷ್ಯದಲ್ಲಿ ಯಾವುದೇ ಗುಂಡಿ ಬೀಳುವ ಸಾಧ್ಯತೆ ಇರುವುದಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.