ಗೋಣಿಕೊಪ್ಪ ವರದಿ, ಏ. ೧೬: ಬೆಳ್ಳೂರು ಗ್ರಾಮದ ದುರ್ಗಾಪರಮೇಶ್ವರಿ ದೇವರ ವಾರ್ಷಿಕೋತ್ಸವ ೮ ದಿನಗಳ ಕಾಲ ನಡೆಯಿತು. ಶುಕ್ರವಾರ ದೇವರ ದರ್ಶನದ ಮೂಲಕ ಸಂಪನ್ನಗೊAಡಿತು. ನಾಡಿನ ಭಕ್ತರು ಪಾಲ್ಗೊಂಡು ಪುನೀತರಾದರು. ತಾ. ೮ ರಂದು ಕೊಡಿಮರ ನಿಲ್ಲಿಸುವ ಆಚರಣೆಯೊಂದಿಗೆ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹವಾಚನ, ಗಣಪತಿ ಹೋಮ, ನವಕ ಕಲಶ, ಕಲಾಭಿಷೇಕ, ಮಹಾಪೂಜೆ, ಪಂಚಗವ್ಯ, ಧ್ವಜಾರೋಹಣ, ನಡೆಯಿತು. ಪಂಚಗವ್ಯ ಕಲಶ, ಕಲಾಶಾಭಿಷೇಕ, ನಿತ್ಯ ಪೂಜೆ, ಪುರುಷಸೂಕ್ತ ಹೋಮ, ಮಹಾಪೂಜೆ, ತೂಚಂಬಕಬಲಿ, ಇರ್‌ಬೊಳಕ್, ದುರ್ಗಾಹೋಮ, ರಂಗಪೂಜೆ, ಅಲಂಕಾರ ಪೂಜೆ, ನೆರ್ಪು, ದೇವರ ಅವಭೃತ ಸ್ನಾನ, ದೇವರ ಪ್ರದಕ್ಷಿಣೆ, ವಸಂತಪೂಜೆ ನಡೆಯಿತು. ಶನಿವಾರ ಕೊಡಿಮರ ಇಳಿಸಿ, ಕಲಶ, ಕಲಶಾಭಿಷೇಕ, ನಿತ್ಯಪೂಜೆ, ಮಹಾಪೂಜೆ ನೆರವೇರಿತು.