ಚೆಯ್ಯಂಡಾಣೆ/ನಾಪೋಕ್ಲು, ಏ. ೧೬: ಸ್ನಾನಕ್ಕೆ ತೆರಳಿದ್ದ ವೇಳೆ ಬಾಲಕಿಯೋರ್ವಳು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಮುಂದಾದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಎಡಪಾಲದ ವೆಂಕಟೇಶ ಎಂಬವರ ಮನೆಗೆ ಬಂದಿದ್ದ ಅವರ ಪರಿಚಿತರಾದ ಉಷಾ ಮತ್ತು ಉಮೇಶ ಎಂಬವರುಗಳು ಎಡಪಾಲ ಗ್ರಾಮದ ಪೈಸಾರಿ ಹೊಳೆಯಲ್ಲಿ ವೆಂಕಟೇಶ, ಆತನ ಪತ್ನಿ, ಇಬ್ಬರು ಮಕ್ಕಳೊಂದಿಗೆ ತೆರಳಿ ಸ್ನಾನ ಮಾಡುತ್ತಿದ್ದಾಗ ವೆಂಕಟೇಶ ಅವರ ಪುತ್ರಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಆ ಸಂದರ್ಭ ಉಷಾ ಆಕೆಯನ್ನು ರಕ್ಷಿಸಿದ್ದಾಳೆ. ಆದರೆ ಇದೇ ವೇಳೆ ಉಷಾ (ಪಂಚು-೨೨) ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.