ಕುಶಾಲನಗರ, ಏ. ೧೬: ಬಾಲಕಿಗೆ ಸಾಕು ನಾಯಿ ಕಚ್ಚಿ ತೀವ್ರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ನಾಯಿಯ ಮಾಲೀಕನ ಮೇಲೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾ. ೮ರಂದು ಕುಶಾಲನಗರ ಬಡಾವಣೆಯೊಂದರ ನಿವಾಸಿ ಡೆನ್ನಿ ಎಂಬವರ ನಾಯಿ ರಸ್ತೆಯಲ್ಲಿ ಹರ್ಲಿನ್ ಎಂಬ ಪುಟ್ಟ ಬಾಲಕಿಗೆ ಕಚ್ಚಿ ತೀವ್ರ ಗಾಯ ಉಂಟಾಗಿತ್ತು.
ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು ಆಕೆಯ ಪೋಷಕರು ಕುಶಾಲನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.