ಮಡಿಕೇರಿ, ಏ. ೧೫: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಡಿಕೇರಿ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ ನಾಪಂಡ ಮುತ್ತಪ್ಪ ನಾಮಪತ್ರ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ. ಯತೀಶ್ ಉಲ್ಲಾಳ್ ಅವರಿಗೆ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎA. ಶರೀಫ್, ರಾಜ್ಯ ಜಂಟಿ ಕಾರ್ಯದರ್ಶಿ ತಮ್ಮಯ್ಯ ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್, ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ

(ಮೊದಲ ಪುಟದಿಂದ) ಕೆ.ಜಿ. ಜಾಶೀರ್ ಅವರೊಂದಿಗೆ ತೆರಳಿ ನಾಪಂಡ ಮುತ್ತಪ್ಪ ನಾಮಪತ್ರ ಸಲ್ಲಿಸಿದರು. ಬಳಿಕ ಚುನಾವಣಾಧಿಕಾರಿ ನಾಮಪತ್ರ ಕ್ರಮಬದ್ಧವಾಗಿದೆಯೇ ಎಂದು ಪರಿಶೀಲನೆ ನಡೆಸಿದರು.

ಇದಕ್ಕೂ ಮುನ್ನ ನಗರದ ಗದ್ದಿಗೆಯಿಂದ ಮುಖ್ಯಬೀದಿಯಲ್ಲಿ ನೂರಾರು ಕಾರ್ಯಕರ್ತರೊಂದಿಗೆ ನಾಪಂಡ ಮುತ್ತಪ್ಪ ಮೆರವಣಿಗೆ ನಡೆಸಿದರು. ಈ ಸಂದರ್ಭ ಪಕ್ಷ ಹಾಗೂ ಅಭ್ಯರ್ಥಿ ಪರ ಘೋಷಣೆಗಳು ಮೊಳಗಿದವು.

ಸುದ್ದಿಗಾರರೊಂದಿಗೆ ಮಾತನಾಡಿದ ನಾಪಂಡ ಮುತ್ತಪ್ಪ, ಸೋಮವಾರ ಚುನಾವಣಾ ಆಯೋಗಕ್ಕೆ ಬಿ.ಫಾರಂ ಸಲ್ಲಿಸುತ್ತೇವೆ. ಪಕ್ಷ ಬಲಿಷ್ಠವಾಗಿದೆ. ಸದೃಢ ಕಾರ್ಯಕರ್ತರಿದ್ದಾರೆ. ಪ್ರಬಲ ಪೈಪೋಟಿ ನೀಡುತ್ತೇವೆ. ಗೆಲ್ಲುವ ಎಲ್ಲಾ ವಾತಾವರಣ ಇದೆ. ಪ್ರಬಲ, ದುರ್ಬಲ ಫಲಿತಾಂಶದಿAದ ಬಹಿರಂಗ ಗೊಳ್ಳುತ್ತದೆ. ಅಭ್ಯರ್ಥಿ ಘೋಷಣೆಯಾಗದೆ ಗೊಂದಲ ಉಂಟಾಗಿ ಸ್ವಲ್ಪ ತೊಂದರೆಯಾಗಿತ್ತು. ಇದೀಗ ಗೊಂದಲ ನಿವಾರಣೆ ಯಾಗಿದೆ. ಎಲ್ಲಾ ರೀತಿಯಲ್ಲಿ ಸಂಘಟನೆ ಮಾಡಲಾಗುತ್ತಿದೆ ಎಂದರು.

ಕೊನೆಘಳಿಗೆಯಲ್ಲಿ ಬಿ.ಫಾರಂ

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಪಂಡ ಮುತ್ತಪ್ಪ ಅವರ ಹೆಸರು ಘೋಷಣೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ನಾಮಪತ್ರ ಸಲ್ಲಿಕೆಗೆ ಮುತ್ತಪ್ಪ ದಿಢೀರ್ ಕೈಗೊಂಡ ನಿರ್ಧಾರ ಜೆಡಿಎಸ್ ವಲಯದಲ್ಲಿ ತೀವ್ರ ಗೊಂದಲ ಸೃಷ್ಟಿಸಿತ್ತು. ತಾ. ೧೪ ರಂದು ಘೋಷಿಸಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುತ್ತಪ್ಪ ಹೆಸರಿರಲಿಲ್ಲ. ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಕೆಗೆ ತೆರಳುವ ಸಂದರ್ಭವೂ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಆದರೆ, ಟಿಕೆಟ್ ದೊರೆಯುವುದು ಖಚಿತ ಎಂದು ಮಾಧ್ಯಮದೊಂದಿಗೆ ಮುತ್ತಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ವರಿಷ್ಠರು ನಾಮಪತ್ರ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆ ತಾನು ಇಂದು ನಾಮಪತ್ರ ಸಲ್ಲಿಸುತ್ತಿರು ವುದಾಗಿಯೂ ಮುತ್ತಪ್ಪ ತಿಳಿಸಿದ್ದರು.

ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ. ರವಿ, ಯುವ ಘಟಕದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ತ್ರಿಶೂಲ್, ಮಡಿಕೇರಿ ತಾಲೂಕು ಅಧ್ಯಕ್ಷ ಉಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.