ಸೋಮವಾರಪೇಟೆ, ಏ. ೧೫: ಕಳೆದ ೨೦೧೫ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ನ್ಯಾಯಾಲಯವು ಆರೋಪಿ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ೧೫.೧೦.೨೦೧೫ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದೇಗೋಡು-ವಡ್ಡರಕೊಪ್ಪಲು ರಸ್ತೆಯಲ್ಲಿ ಟ್ರಾö್ಯಕ್ಟರ್ ಅವಘಡಕ್ಕೀಡಾಗಿ ಕಾರ್ಮಿಕ ರಾಮು(ರಮೇಶ್) ಎಂಬವರು ಮೃತಪಟ್ಟಿದ್ದರು. ಘಟನೆಗೆ ಟ್ರಾö್ಯಕ್ಟರ್ ಚಾಲಕ, ಒಡೆಯನಪುರದ ಚಾಮಿ ಅವರ ಪುತ್ರ ಕೆ.ಸಿ. ರಾಜು ಎಂಬಾತನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯೇ ಕಾರಣ ಎಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಸೋಮವಾರಪೇಟೆ

ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ : ಆರೋಪಿಗೆ ಶಿಕ್ಷೆ

(ಮೊದಲ ಪುಟದಿಂದ) ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗೋಪಾಲಕೃಷ್ಣ ಅವರು ಆರೋಪಿ ಚಾಲಕನಿಗೆ ೧ ವರ್ಷ, ೯ ತಿಂಗಳು, ೧೫ ದಿನಗಳ ಕಾಲ ಸಾದಾ ಸಜೆ ಹಾಗೂ ೩೫೦೦ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಿರ್ಯಾದಿ ಪರ ಸರ್ಕಾರಿ ಅಭಿಯೋಜಕ ಹೇಮಂತ್ ಪೊನ್ನಪ್ಪ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಕಳೆದ ತಾ.೧೫.೧೦.೨೦೧೫ರಂದು ಟಿಂಬರ್ ಕೆಲಸಕ್ಕೆ ತೆರಳಿದ್ದ ರಾಮು, ರಾಮೇನಹಳ್ಳಿ ಧರ್ಮಪ್ಪ ಅವರ ತೋಟದಿಂದ ಸಿಲ್ವರ್ ಮರದ ದಿಮ್ಮಿಗಳನ್ನು ಕೆ.ಸಿ. ರಾಜು ಚಾಲನೆ ಮಾಡುತ್ತಿದ್ದ ಟ್ರಾö್ಯಕ್ಟರ್‌ಗೆ ತುಂಬಿಸಿ, ಇತರ ಕಾರ್ಮಿಕರೊಂದಿಗೆ ಟ್ರಾö್ಯಕ್ಟರ್‌ನಲ್ಲಿ ಮಾದೇಗೋಡು ಕಡೆಗೆ ಬರುತ್ತಿದ್ದರು.

ಈ ಸಂದರ್ಭ ವಡ್ಡರಕೊಪ್ಪಲು ಗ್ರಾಮದ ಮೋಹನ್ ಅವರ ಮನೆ ಸಮೀಪ ಟ್ರಾö್ಯಕ್ಟರ್ ನಿಯಂತ್ರಣ ಕಳೆದುಕೊಂಡು ೨೦ ಅಡಿ ಆಳದ ತೋಡಿಗೆ ಬಿದ್ದಿತು. ಪರಿಣಾಮ ರಾಮು ಅವರ ಮೇಲೆ ಸಿಲ್ವರ್ ಮರದ ದಿಮ್ಮಿಗಳು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಗೆ ಟ್ರಾö್ಯಕ್ಟರ್ ಚಾಲಕ ಕೆ.ಸಿ. ರಾಜು ಅವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಆಪಾದಿಸಿ ಶನಿವಾರಸಂತೆ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆ ಸಾದಾ ಸಜೆಯೊಂದಿಗೆ, ೩೫೦೦ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.