ಮಡಿಕೇರಿ, ಏ. ೧೪: ಕಾರು ಹಾಗೂ ಬಸ್ಸಿನ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯ ಸುದರ್ಶನ ವೃತ್ತದ ೨ನೆ ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿಪಡಿಸಿದೆ. ಪರಿಣಾಮ ಅಪಘಾತಕ್ಕೊಳಗಾದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿಯ ಇಂಡಿಯಾ ಗ್ಯಾರೇಜ್‌ನ ಟೆಸ್ಟ್ ಡ್ರೆöÊವ್‌ಗೆ ತಂದಿದ್ದ ಡೆಮೋ ಕಾರು ಎಂದು ತಿಳಿದು ಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.