ಕೂಡಿಗೆ, ಏ. ೧೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ವಿದ್ಯುತ್ ಪೂರೈಕೆಯಲ್ಲಿ ಸಮರ್ಪಕವಾದ ವೋಲ್ಟೇಜ್ ಇಲ್ಲದ ಕಾರಣದಿಂದಾಗಿ ಗ್ರಾಮ ಪಂಚಾಯತಿ ವತಿಯಿಂದ ಕೊರೆಸಲಾದ ಕೊಳವೆ ಬಾವಿಗಳಿಂದ ಕುಡಿಯುವ ನೀರಿನ ಸರಬರಾಜು ಮಾಡಲು ತೊಂದರೆ ಆಗುತ್ತಿವೆ.

ಶಿರಂಗಾಲ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ರೈತರು ಕೊಳವೆ ಬಾವಿಯನ್ನು ಕೊರೆಸಿಕೊಂಡಿರುತ್ತಾರೆ. ಅಲ್ಲದೆ ಅದೇ ನೀರನ್ನು ನಂಬಿ ಬೇಸಾಯ ಮಾಡಿರುತ್ತಾರೆ. ಅವರುಗಳಿಗೂ ಸಹ ವಿದ್ಯುತ್ ವೋಲ್ಟೇಜ್ ಕೊರತೆಯಿಂದ ನೀರು ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯಿಂದಾಗಿ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಬೇಸಾಯಕ್ಕೆ ತೊಂದರೆ ಉಂಟಾಗಿದ್ದು, ಸರಿಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.