ಕುಶಾಲನಗರ, ಏ. ೧೪ : ನೋಂದಾವಣಿ ಪ್ರಕ್ರಿಯೆಗಾಗಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಕಾವೇರಿ ತತ್ರಾಂಶ ೨ ಅನ್ನು ಅಳವಡಿಸುತ್ತಿದ್ದು, ಇದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಆಗ್ರಹಿಸಿ ಹಾಗೂ ಕೆಲವು ವಿಚಾರಗಳ ಕೈ ಬಿಡಲು ಒತ್ತಾಯಿಸಿ ಕುಶಾಲನಗರ ವಕೀಲರ ಸಂಘದ ಮೂಲಕ ಕುಶಾಲನಗರ ಉಪ ನೋಂದಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕುಶಾಲನಗರದ ಉಪ ನೋಂದಣಾಧಿಕಾರಿ ಅನಿತಾ ಅವರ ಮೂಲಕ ಸರ್ಕಾರಕ್ಕೆ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಕಾವೇರಿ ತತ್ರಾಂಶ - ೨ ರಲ್ಲಿ ಗಂಗಾ, ತುಂಗಾ, ನುಡಿ, ಬರಹ, ಒಣಜು ಭಾಷೆಗಳನ್ನು ಅಳವಡಿಸಿದೆ ಕೇವಲ ಆಂಗ್ಲ ಭಾಷೆಯಲ್ಲಿ ದಸ್ತಾವೇಜುಗಳ ಸ್ವೀಕಾರಕ್ಕೆ ನಿರೂಪಿತವಾಗಿದೆ. ಇದರಿಂದ ಸಾಮಾನ್ಯ ಜನರಿಗೆ ತುಂಬಾ ಅನಾನುಕೂಲವಾಗುತ್ತದೆ. ಹೊಸ ತತ್ರಾಂಶದಲ್ಲಿ ಕಚೇರಿಯ ತಂತ್ರಜ್ಞರು ನಿಗದಿ ಪಡಿಸುವ ಸಮಯಕ್ಕೆ ಪಕ್ಷಗಾರರೊಂದಿಗೆ ವಕೀಲರು ಅಗಮಿಸಬೇಕು. ಇದು ಸಾರ್ವಜನಿಕರಿಗೆ ಮತ್ತು ದಸ್ತಾವೇಜುಗಾರರಿಗೆ ತೊಂದರೆ. ಅದರಿಂದ ಇದನ್ನು ಕೈ ಬಿಡಬೇಕು.

ಕುಶಾಲನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಪುರಸಭೆ ಮತ್ತು ಆರ್ ಡಿ ಪಿಐ ಆರ್ ಗಳು ಅಂದರೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಸ್ಥಿರಾಸ್ಥಿಯ ದಾಖಲಾತಿಗಳು ಅಂತರಜಾಲದಲ್ಲಿ ಲಭ್ಯವಿರುವುದಿಲ್ಲ. ಹಾಗಾಗಿ ಇ-ಸ್ವತ್ತು ಮತ್ತು ನಮೂನೆ ೯ ಮತ್ತು ೧೧ಎ ಗಳಲ್ಲಿ ಒಂದು ವೇಳೆ ಏನಾದರೂ ವ್ಯತ್ಯಾಸಗಳು ಇದ್ದಂತಹ ಪಕ್ಷಕ್ಕೆ ಸ್ವೀಕೃತವಾದ ಕರಡು ಪ್ರತಿಯಲ್ಲಿ ಮಾಡಲು ಅವಕಾಶ ಕಲ್ಪಿಸಬೇಕು.

ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ರಾಷ್ಟಿçÃಯ ಬ್ಯಾಂಕ್ ಗಳೊಂದಿಗೆ ಸಹಕಾರ ಸಂಸ್ಥೆಗಳಿAದಲೂ ಪಾವತಿಗೆ ಸದ್ರಿ ತತ್ರಾಂಶದಲ್ಲಿ ಅವಕಾಶ ನೀಡಬೇಕು ಎಂದು ಇನ್ನು ಹಲವು ವಿಚಾರಗಳ ಬಗ್ಗೆ ಮನವಿಯನ್ನು ಸಲ್ಲಿಸಿದ್ದಾರೆ. ಪ್ರಮುಖವಾಗಿ ಸರಕಾರ ಗುತ್ತಿಗೆ ನೀಡಿರುವ ಕಂಪನಿ ತಂತ್ರಜ್ಞ ನೋಂದಣಾಧಿಕಾರಿ ಕಚೇರಿ ಸಮೀಪ ಕಚೇರಿ ತೆರೆದು ದಂಧೆ ಮಾಡುವ ಪ್ರಯತ್ನದಲ್ಲಿದ್ದು ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಲಾಗಿದೆ. ಕುಶಾಲನಗರ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟರಮಣ ಭಟ್, ಕಾರ್ಯದರ್ಶಿ ಕೆ.ಬಿ.ಮೋಹನ್, ಖಜಾಂಚಿ ಎಸ್.ಕೆ.ಮಂಜುನಾಥ್, ಶರತ್, ಸವಿತಾ, ಚಂದ್ರಿಕಾ, ಜೆ.ಜೆ.ನವೀನ್ ಇತರರು ಹಾಜರಿದ್ದರು.