ನಾಪೋಕ್ಲು, ಏ. ೧೪: ಇಲ್ಲಿನ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಾಗೂ ಲಿಯೋ ಕ್ಲಬ್ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ನಾಪೋಕ್ಲು ಲಯನ್ಸ್ ಕ್ಲಬ್‌ಗೆ ಭೇಟಿ ನೀಡಿ ಹಳೆ ತಾಲೂಕಿನ ಬಸ್ಸು ತಂಗುದಾಣವನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ದತ್ತು ಸ್ವೀಕರಿಸಿ ಬಸ್ಸು ತಂಗುದಾಣದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಯಿತು ಬಳಿಕ ಕೊಡವ ಸಮಾಜದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ವಲಯ ಅಧ್ಯಕ್ಷ ಮುಕ್ಕಾಟಿರ ಎಂ ವಿನಯ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಲಯನ್ಸ್, ಮಲ್ಟಿಪಲ್ ಚೇರ್ಮನ್ ವಸಂತಶೆಟ್ಟಿ, ಲಿಯೋ ಪದಗ್ರಹಣ ಅಧಿಕಾರಿ ಪ್ರೀತಮ್ ಪೊನ್ನಪ್ಪ, ಪ್ರಗತಿಶೆಟ್ಟಿ, ಖಜಾಂಜಿ ಕುಟ್ಟಪ್ಪ ಎಂ.ಬಿ , ಪ್ರಾಂತೀಯ ಅಧ್ಯಕ್ಷ ಕೋಟೆರ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಮೋಹನ್ ಕುಮಾರ್, ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ನೂತನವಾಗಿ ಲಿಯೋ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ನೂತನ ಅಧ್ಯಕ್ಷರಾಗಿ ಕೇಟೋಳಿರ ಗಾಯನ ಚರ್ಮಣ, ಕಾರ್ಯದರ್ಶಿಯಾಗಿ ರಿಜ್ವಾನ್, ಕೋಶಾಧಿಕಾರಿಯಾಗಿ ಶಿವಚಾಳಿಯಂಡ ಕಾಳಪ್ಪ ಆಯ್ಕೆಯಾಗಿ ವಿವಿಧ ಶಾಲೆಗಳ ೨೫ ವಿದ್ಯಾರ್ಥಿಗಳ ತಂಡ ಸೇರ್ಪಡೆಯಾಯಿತು. ಕ್ಲಬ್ ಮಾರ್ಗದರ್ಶಕರಾಗಿ ಕೋಟೆರ ಡಾ.ಪಂಚಮ್ ತಿಮ್ಮಯ್ಯ , ಕೇಟೋಳಿರ ರತ್ನ ಚರ್ಮಣ ಕಾರ್ಯನಿರ್ವಹಿಸಿದರು ನಾಳಿಯಂಡ ಪ್ರೀತಂ ಪೊನ್ನಪ್ಪ ಪದಗ್ರಹಣ ನೆರವೇರಿಸಿದರು.

ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಧ್ವಜವಂದನೆ ನೆರವೇರಿಸಿದರು. ಎಂ.ಎA. ವಿನಯ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ ವರದಿ ವಾಚಿಸಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭ ಮಂದಪAಡ ಪುಷ್ಪ ಸತೀಶ್ ಹಾಗೂ ಬಾಚಮಂಡ ಅಪ್ಪಣ್ಣ ನೂತನ ಲಯನ್ಸ್ ಕ್ಲಬ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. .