ಮಡಿಕೇರಿ, ಏ. ೧೨: ಇಂದಿರಾನಗರ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ೧೩೩ನೇ ವಾರ್ಷಿಕೋತ್ಸವ ತಾ. ೧೭ ರಿಂದ ೧೯ ರವರೆಗೆ ನಡೆಯಲಿದೆ. ತಾ. ೧೭ ರಂದು ಸಂಜೆ ೫ ಗಂಟೆಯಿAದ ನಗರದಲ್ಲಿ ಮೆರವಣಿಗೆ, ತಾ. ೧೮ ರಂದು ಮಧ್ಯಾಹ್ನ ೩ ಗಂಟೆಗೆ ಮನೆ ಮನೆಯಿಂದ ಪೂಜೆ, ರಾತ್ರಿ ೮ ಗಂಟೆಗೆ ಮನೆ ಮನೆಯಿಂದ ಆರತಿ, ೯ ಗಂಟೆಯಿAದ ದೇವಿಗೆ ಮಹಾಮಂಗಳಾರತಿ, ಹೂವಿನ ವರ ಬೇಡಿದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ತಾ. ೧೯ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧.೩೦ರ ವರೆಗೆ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸುವ ಕಾರ್ಯ ನಡೆಯಲಿದೆ. ತಾ. ೩೦ ರಂದು ಮಧ್ಯಾಹ್ನ ೩ ಗಂಟೆಗೆ ಗುಳಿಗನ ಪೂಜೆ ನಡೆಯಲಿದೆ.