ಮಡಿಕೇರಿ, ಏ. ೧೨ : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಇವರ ವತಿಯಿಂದ, ಮತದಾನದ ಜಾಗೃತಿ ಸಾರುವ ನಿಟ್ಟಿನಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಇವರ ಸಹಯೋಗದೊಂದಿಗೆ, ಮುಂಬರುವ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿ ಅಭಿಯಾನವನ್ನು ಬೈಕ್ ಜಾಥಾದ ಮೂಲಕ ಆಯೋಜಿಸಲಾಗಿದೆ.
ಬೈಕ್ ಜಾಥಾವು ತಾ. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಬನ್ನಿಮಂಟಪದಿAದ ಪ್ರಾರಂಭ ಗೊಂಡು ರಾಜಾಸೀಟು ಉದ್ಯಾನವನ ದಲ್ಲಿ ಕೊನೆಗೊಳ್ಳಲಿದೆ. ಈ ಮತದಾನ ಜಾಗೃತಿ ಬೈಕ್ ಜಾಥಾದಲ್ಲಿ ವರ್ತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.