ಮಡಿಕೇರಿಗೆ ಅಪ್ಪಚ್ಚು ರಂಜನ್-ವೀರಾಜಪೇಟೆಗೆ ಕೆ.ಜಿ. ಬೋಪಯ್ಯ
ಮಡಿಕೇರಿ, ಏ. ೧೧ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಎಳೆಯಲಾಗಿದ್ದು, ಹಾಲಿ ಶಾಸಕರುಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮೊದಲ ಹಂತದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ನಾಯಕರು ಬಿಡುಗಡೆ ಮಾಡಿದ್ದು, ಮಡಿಕೇರಿ ಕ್ಷೇತ್ರದಿಂದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದಿಂದ ಕೆ.ಜಿ. ಬೋಪಯ್ಯ ಅವರುಗಳಿಗೆ ಮತ್ತೆ ಟಿಕೆಟ್ ನೀಡಲಾಗಿದೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾತ್ರಿ ಸುದ್ದಿಗೋಷ್ಠಿ ನಡೆಸಿದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿಗಳಾದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರುಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಒಟ್ಟು ೨೨೪ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಮೊದಲ ಪಟ್ಟಿಯಲ್ಲಿಯೇ ಅಪ್ಪಚ್ಚು ರಂಜನ್ ಹಾಗೂ ಬೋಪಯ್ಯ ಅವರುಗಳ ಹೆಸರುಗಳು ಘೋಷಿಸಲ್ಪಟ್ಟಿದೆ.
ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬAಧ ಭಾರತೀಯ ಜನತಾ ಪಾರ್ಟಿ ಬಹಳಷ್ಟು ಎಚ್ಚರ ವಹಿಸಿ ಅಳೆದೂ-ತೂಗಿ ಆಯ್ಕೆ ಮಾಡಿದೆ. ಕೇಂದ್ರ ನಾಯಕರ ಸೂಚನೆಯಂತೆ ಹಳೆಯ ಹಾಗೂ ಹಿರಿಯ ಅಭ್ಯರ್ಥಿಗಳ ಬದಲಿಗೆ ಹೊಸಬರಿಗೆ ಟಿಕೆಟ್ ನೀಡಲಾಗುವುದೆಂದು ಸುದ್ದಿ ಹರಡುತ್ತಲೇ ಪಕ್ಷದಲ್ಲಿ ಹಾಗೂ ಮತದಾರರಲ್ಲಿ ಕುತೂಹಲ ಕೆರಳಿಸಿತ್ತು. ಬಿಜೆಪಿ ಪಕ್ಷದ ವತಿಯಿಂದಲೂ ರಾಜ್ಯದ ವಿವಿಧ ಸುಮಾರು ೩೫ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು.
ಅಂತೆಯೇ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಿಂದಲೂ ತಲಾ ಮೂವರು ಅಭ್ಯರ್ಥಿಗಳ ಹೆಸರುಗಳು ಚಾಲ್ತಿಯಲ್ಲಿದ್ದವು. ಮಡಿಕೇರಿ ಕ್ಷೇತ್ರದಿಂದ ಅಪ್ಪಚ್ಚು ರಂಜನ್, ಬಿ.ಬಿ. ಭಾರತೀಶ್ ಹಾಗೂ ಡಾ. ಬಿ.ಸಿ. ನವೀನ್ಕುಮಾರ್ ಅವರುಗಳ ಹೆಸರುಗಳು ಕೇಳಿ ಬಂದಿದ್ದರೆ, ಇತ್ತ ವೀರಾಜಪೇಟೆ ಕ್ಷೇತ್ರದಿಂದ ಕೆ.ಜಿ. ಬೋಪಯ್ಯ, ಎ.ಕೆ. ಮನುಮುತ್ತಪ್ಪ ಹಾಗೂ ರವಿಕುಶಾಲಪ್ಪ ಅವರುಗಳ ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಎಲ್ಲ ಗೊಂದಲ, ಕುತೂಹಲಕ್ಕೆ ತೆರೆ ಎಳೆಯಲಾಗಿದ್ದು, ಹಾಲಿ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಬೋಪಯ್ಯ ಅವರುಗಳ ಹೆಸರುಗಳನ್ನೇ ಅಂತಿಮಗೊಳಿಸಲಾಗಿದೆ.
ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿತ್ತಾದರೂ ಕೊನೆಗೂ ಈ ಈರ್ವರು
(ಮೊದಲ ಪುಟದಿಂದ) ನಾಯಕರನ್ನೇ ಆಯ್ಕೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ೩೫ ಕ್ಷೇತ್ರಗಳಿಗೆ ಸಧ್ಯದಲ್ಲಿಯೇ ಘೋಷಣೆ ಮಾಡಲಾಗುವುದೆಂದು ಬಿಜೆಪಿ ವರಿಷ್ಠರು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಉಸ್ತುವಾರಿ ಅಣ್ಣಾಮಲೈ, ಪಕ್ಷದ ಹಿರಿಯ ನಾಯಕ ಮನ್ಸುಖ್ ಮಾಂಡವೀಯ ಇದ್ದರು.
ರಂಜನ್ ಅವರ ಕಿರು ಪರಿಚಯ
ಬಿ.ಎ. ಪದವಿಧರರಾಗಿರುವ ಅಪ್ಪಚ್ಚು ರಂಜನ್ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಕ್ರೀಡಾಪಟುವಾಗಿದ್ದರು. ೧೯೭೮ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಇದರೊಂದಿಗೆ ವಿವಿಧ ಸಂಘ - ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ೧೯೮೦ರಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ೧೯೮೬ ರಿಂದ ೧೯೯೧ರವರೆಗೆ ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರಾಗಿ, ನಂತರ ೧೯೯೧-೯೫ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ೧೯೯೪ರಲ್ಲಿ ಶಾಸಕರಾಗಿ ಆಯ್ಕೆಯಾಗಿ, ೧೯೯೯-೨೦೦೪ರಲ್ಲಿ ಎರಡನೇ ಬಾರಿಗೆ, ೨೦೦೮-೧೩ರಲ್ಲಿ ಮೂರನೇ ಬಾರಿಗೆ, ೨೦೧೩-೨೦೧೮ರಲ್ಲಿ ೪ನೇ ಬಾರಿಗೆ ಹಾಗೂ ೨೦೧೮ರಲ್ಲಿ ೫ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ವಿವಿಧ ಸಮಿತಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೮ರಲ್ಲಿ ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ನಂತರದಲ್ಲಿ ರಾಜ್ಯ ಕ್ರೀಡಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ೨೦೧೮ರಲ್ಲಿ ಕೊಡಗಿನಲ್ಲಿ ಎದುರಾದ ಭೂಕುಸಿತ, ಕೋವಿಡ್ ಸಂದರ್ಭದಲ್ಲಿ ಕಾಳಜಿ ತೋರಿ ಕೋವಿಡ್ ಆಸ್ಪತ್ರೆಗೆ ಪಿಪಿಟಿ ಕಿಟ್ ಧರಿಸಿ ಒಳ ಹೋಗಿ ಸೋಂಕಿತರ ಯೋಗಕ್ಷೇಮ ವಿಚಾರಿಸಿ, ಆತ್ಮಸ್ಥೆöÊರ್ಯ ತುಂಬಿದ ರಾಜ್ಯದ ಏಕೈಕ ಶಾಸಕ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಜನರ ಸೇವಕನಾಗಿ ದುಡಿಯುವೆ
ಭಾರತೀಯ ಜನತಾ ಪಕ್ಷವು ಶಾಸಕರು ಹಾಗೂ ಕಾರ್ಯಕರ್ತರ ಕೆಲಸ -ಹೊಂದಾಣಿಕೆಯನ್ನು ನೋಡಿಕೊಂಡು ನಿರ್ಧಾರ ಕೈಗೊಂಡಿದ್ದಾರೆ. ತುಂಬಾ ಸಂತೋಷವಾಗಿದೆ. ತನ್ನನ್ನು ೫ ಬಾರಿ ಗೆಲ್ಲಿಸಿದ ಮತದಾರರು ೬ನೇ ಬಾರಿಗೆ ಗೆಲ್ಲಿಸಿಕೊಡಬೇಕಾಗಿ ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಎಂದಿಗೂ ಎಂಎಲ್ಎ ಎಂದು ಹೇಳಿಕೊಳ್ಳದೆ ಜನರ ಸೇವಕನಾಗಿ ದುಡಿಯುತ್ತೇನೆ. ೧೯೯೪ರಲ್ಲೂ ಇದನ್ನೇ ಹೇಳಿದ್ದೇ. ಈಗಲೂ ಅದನ್ನೇ ಹೇಳುತ್ತೇನೆ. ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಅಪ್ಪಚ್ಚು ರಂಜನ್ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.
ಬೋಪಯ್ಯ ಅವರ ಕಿರು ಪರಿಚಯ
ಕೆ.ಜಿ. ಬೋಪಯ್ಯ ಅವರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಎ.ಬಿ.ವಿ.ಪಿ. ಸದಸ್ಯತ್ವ ಪಡೆದು ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಪರ ಕೆಲಸ ಮಾಡಿ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ೧೯೭೦ರ ದಶಕದಲ್ಲಿ ರಾಜ್ಯ ಸರಕಾರ ‘ಕಂಬದಕಡ ಅಣೆಕಟ್ಟೆ’ಗೆ ವಿರೋಧಿಸಿದರು. ೧೯೭೪ರಲ್ಲಿ ಬಿ.ಎಸ್ಸಿ. ಪದವಿ ಪೂರೈಸಿ ಬೆಂಗಳೂರಿನಲ್ಲಿ ಬಿ.ಎಂ.ಎಸ್. ಕಾಲೇಜಿಗೆ ಎಲ್.ಎಲ್.ಬಿ. ಪದವಿಗೆ ಸೇರ್ಪಡೆಗೊಂಡರು. ೧೯೭೬ರಲ್ಲಿ ಜೈಲುವಾಸ ಅನುಭವಿಸಿದರು. ೧೯೮೦ರಲ್ಲಿ ಕಾನೂನು ಪದವಿಯನ್ನು ಪೂರೈಸಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯರಾಗಿದ್ದುಕೊಂಡು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಅಧ್ಯಕ್ಷರಾಗಿ, ಜೊತೆಗೆ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ೨೦೦೪ರಲ್ಲಿ ಮೊದಲ ಬಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.
೨ನೇ ಬಾರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕರಾಗಿ ರಾಜ್ಯದ ೪ ದಿನದ ಹಂಗಾಮಿ ಸಭಾಧ್ಯಕ್ಷರಾಗಿ ೨೨೪ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ರಾಜ್ಯ ಉಪ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೨೦೦೯ರಲ್ಲಿ ರಾಜ್ಯ ವಿಧಾನಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಹಾಗೂ ೨೦೧೮ರಲ್ಲಿ ನಾಲ್ಕನೇ ಬಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜನರ - ಕಾವೇರಿ ಮಾತೆಯ ಆಶೀರ್ವಾದವೇ ಕಾರಣ
ಕೊಡಗಿನ ಜನತೆ ತನ್ನನ್ನು ೪ ಬಾರಿ ಹಾಗೂ ಅಪ್ಪಚ್ಚು ರಂಜನ್ ಅವರನ್ನು ೫ ಬಾರಿ ಗೆಲ್ಲಿಸಿದ್ದಾರೆ. ಇಬ್ಬರೂ ವಿರೋಧ ಪಕ್ಷದಲ್ಲೂ, ಆಡಳಿತ ಪಕ್ಷದಲ್ಲೂ ಸಾಕಷ್ಟು ಕೆಲಸ ಮಾಡಿದ್ದು, ಅದರಲ್ಲೂ ಕೊಡಗಿನ ಅಭಿವೃದ್ಧಿ ಸಮಸ್ಯೆಗಳಿಗೆ, ಸಂಕಷ್ಟದ ಕಾಲದಲ್ಲಿ ಸ್ಪಂದಿಸಿದ್ದೇವೆ. ವೀರಾಜಪೇಟೆ ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ಅಭಿವೃದ್ಧಿ ಕೆಲಸ ಒಂದು ಸವಾಲಾಗಿತ್ತು.
ಆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಪಕ್ಷ ಮತ್ತೆ ಟಿಕೆಟ್ ನೀಡಿದೆ. ಜನರ ಅಪೇಕ್ಷೆಯೂ ಅದೇ ಆಗಿತ್ತು. ಯಾವುದೇ ಕಾರಣಕ್ಕೂ ಹಿಂದೆ ನಿಲ್ಲಬಾರದು ಎಂಬ ಒತ್ತಡವಿತ್ತು. ಜನರ ಹಾಗೂ ಕಾವೇರಿ ಮಾತೆಯ ಆಶೀರ್ವಾದದಿಂದ ಮತ್ತೆ ಅವಕಾಶ ಸಿಕ್ಕಿದೆ. ಜನರ ವಿಶ್ವಾಸಕ್ಕೆ ಎಂದಿಗೂ ದ್ರೋಹ ಆಗದಂತೆ ಕೆಲಸ ಮಾಡುವೆ. ದೇವರ ನಂಬಿ ಕೆಲಸ ಮಾಡುವವನು ನಾನು. ಅವಕಾಶ ನೀಡಿದ ಪಕ್ಷದ ವರಿಷ್ಠರಿಗೂ ಧನ್ಯವಾದ ಹೇಳುವೆ ಎಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.ಶಿಗ್ಗಾAವ್ನಿAದ ಬೊಮ್ಮಾಯಿ
ಶಿಗ್ಗಾಂವ್ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಭಾಸ್ಕರ್ ರಾವ್ ಅವರಿಗೆ ಚಾಮರಾಜಪೇಟೆಯಿಂದ ಟಿಕೆಟ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ವಿ. ಸೋಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಆರ್. ಅಶೋಕ್ ಅವರನ್ನು ಕಣಕ್ಕಿಳಿಸಲಾಗಿದೆ.