ಚೆಟ್ಟಳ್ಳಿ, ಏ. ೧೧: ಪ್ರವಾಸಿ ತಾಣವೆಂದು ಹೆಸರುಗಳಿಸಿರುವ ದುಬಾರೆಯ ಸಾಕಾನೆ ಶಿಬಿರದ ಮಧ್ಯದಲ್ಲಿರುವ ಸರಕಾರಿ ಶಾಲೆಗೆ ತಡೆಗೋಡೆ ಇಲ್ಲದೆ ಹಲವು ವರ್ಷಗಳಿಂದ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗದ ಹಲವು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕಂiÀiðದ ಕೊರತೆ ಎದ್ದು ಕಾಣುತ್ತವೆ. ೧ ರಿಂದ ೫ನೇ ತರಗತಿಯವರೆಗೆ ಬರೀ ಸಾಕಾನೆ ಶಿಬಿರದ ಮಾವುತರ ಹಾಗೂ ಕಾವಾಡಿಗಳ ೨೫ ಮಕ್ಕಳು ಕಲಿಯುವ ಶಾಲೆಯೊಂದರ ಪರಿಸ್ಥಿತಿ ಕೂಡ ಅದೇ ರೀತಿಯಾಗಿದೆ. ರಾತ್ರಿ ಇಡೀ ಅರಣ್ಯದೊಳಗಿಂದ ಬರುವ ಕಾಡು ದನಗಳ ವಾಸ ಸ್ಥಾನವಾಗಿದೆ ಈ ಶಾಲೆ. ಬೆಳಿಗ್ಗೆ ಶಾಲೆಯ ಸುತ್ತಲು ಸಗಣಿ ರಾಶಿ. ಶಿಬಿರದ ಸಾಕಾನೆಗಳು ಶಾಲೆಯ ಮುಂದಿನಿAದಲೇ ಹಾದು ಹೋಗುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ಕಾಡಾನೆಯೊಂದು ಸಾಕಾನೆ ಶಿಬಿರಕ್ಕೆ ನುಗ್ಗಿತ್ತು. ಶಾಲೆಯ ಸುತ್ತಲು ತಡೆಗೋಡೆ ಇಲ್ಲದೆ ಮಕ್ಕಳಿಗೆ ಭದ್ರತೆಯೇ ಇಲ್ಲದಂತಾಗಿದೆ. ವರ್ಗಾವಣೆಗೊಂಡ ಶಿಕ್ಷಕರೂ ಈ ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಶಾಲೆ ಪ್ರಾರಂಭವಾದಲ್ಲಿAದ ಈ ಶಾಲೆಯ ಸುತ್ತಲು ತಡೆಗೋಡೆ ನಿರ್ಮಿಸಿಕೊಡಬೇಕೆಂದು ಶಿಕ್ಷಣ ಇಲಾಖೆಗೆ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿದರೂ ಅರ್ಜಿಗಳೆಲ್ಲ ಫೈಲಿನಲ್ಲಿ ದೂಳು ಹಿಡಿಯುತ್ತಿವೆ.

ಮಾನವೀಯತೆ ಮೆರೆದ ಅರಣ್ಯ ಇಲಾಖೆ

ದುಬಾರೆಯ ಸಾಕಾನೆ ಶಿಬಿರದೊಳಗೆ ಸರಕಾರಿ ಶಾಲೆಗೆ ತಡೆಗೋಡೆ ನಿರ್ಮಾಣವಾಗದ ಹಿನ್ನೆಲೆ ಅರಣ್ಯ ಇಲಾಖೆ ಕಳೆದ ವಾರ ಶಾಲೆಯ ಸುತ್ತಲು ತಾತ್ಕಾಲಿಕ ತಂತಿ ಬೇಲಿಯನ್ನು ನಿರ್ಮಿಸಿಕೊಟ್ಟಿದೆ. ಶಾಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಅರಣ್ಯ ಇಲಾಖೆಯ ವತಿಯಿಂದ ನೀರಿನ ಪೈಪನ್ನು ಅಳವಡಿಸಲಾಗಿದೆ.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸರಕಾರದಿಂದ ಅನುದಾನಗಳು ಬರುತ್ತಿದ್ದರೂ ದುಬಾರೆಯಂತ ಪುಟ್ಟ ಸರಕಾರಿ ಶಾಲೆಗಳು ಸೌಲಭ್ಯ ವಂಚಿತ ವಾಗುತ್ತಿರುವುದು ವಿಪರ್ಯಾಸ.

- ಪುತ್ತರಿರ ಕರುಣ್ ಕಾಳಯ್ಯ