ಹೆಬ್ಬಾಲೆ, ಏ. ೧೧: ಶಾಲಾ ಮಕ್ಕಳು ಶಾಲೆ ಮುಗಿದ ನಂತರ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಇಂತಹ ಶಿಬಿರಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೆಚ್ಚಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಹೆಚ್.ಎಂ. ವೆಂಕಟೇಶ್ ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸ.ಮಾ.ಪ್ರಾ. ಶಾಲೆ ಹೆಬ್ಬಾಲೆ ಶಾಲೆಯ ಆವರಣದಲ್ಲಿ ಒಂದು ವಾರಗಳ ಕಾಲ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿದ್ದ ಶಾಲೆಯ ಶಿಕ್ಷಕಿ ಜಾನಕಿ ಸಿ.ಎಸ್. ಮಾತನಾಡಿ, ಪೋಷಕರು ವಿದ್ಯಾಭ್ಯಾಸದ ಹೆಸರು ಹೇಳಿ ಮಕ್ಕಳಿಗೆ ಒತ್ತಡ ಹೇರಬಾರದು. ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆ ಅವಕಾಶ ನೀಡಬೇಕು. ಇಂತಹ ಶಿಬಿರಗಳು ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು. ಹಿರಿಯ ಶಿಕ್ಷಕ ಹೆಚ್.ಈ. ರಮೇಶ್ ಮಾತನಾಡಿ, ಮಕ್ಕಳು ಶ್ರದ್ಧೆ ಮತ್ತು ಶಿಸ್ತುವಿನಿಂದ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದರು.
ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕಿ ಸಿ.ಎಂ. ಬಬಿತ ಕಾರ್ಯಕ್ರಮ ಸಂಯೋಜಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು ಶಿಕ್ಷಕಿ ಹೆಚ್.ಬಿ. ಪುಷ್ಪಾವತಿ, ಅತಿಥಿ ಶಿಕ್ಷಕಿ ನೀಲಾಂಬಿಕೆ ಮತ್ತು ಸಿ.ಎಂ. ಬಬಿತಾ ನೇತೃತ್ವದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.