ಮಡಿಕೇರಿ, ಏ. ೯: ಕಾರ್ಮಾಡು ಕಾವಾಡಿ ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ತಾ. ೫ ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿತ್ತು. ತಾ. ೧೪ ರ ವರೆಗೆ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ತಾ. ೧೧ ರಂದು ದೇವರು ಬನಕ್ಕೆ ತೆರಳುವುದು, ವಸಂತ ಪೂಜೆ, ತಾ. ೧೨ ರಂದು ದೊಡ್ಡ ಹಬ್ಬದಂದು ಮಧ್ಯಾಹ್ನ ದೇವರ ಕುದುರೆ, ಬೊಳಕಾಟ್, ಸಾಂಸ್ಕೃತಿಕ ಕಾರ್ಯಕ್ರಮ, ದೇವರು ಅವಭೃತ ಸ್ನಾನಕ್ಕೆ ತೆರಳುವುದು ಹಾಗೂ ತಾ. ೧೪ ರಂದು ಭದ್ರಕಾಳಿ, ಬೋಡ್‌ನಮ್ಮೆ ನಡೆಯಲಿದೆ.