ಕರಿಕೆ, ಏ, ೯: ಬಿರು ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜನತೆ ವರುಣನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಗ್ರಾಮದ ಚಂದ್ರಗಿರಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಮಳೆ ಬಾರದಿದ್ದಲ್ಲಿ ಜನತೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗುವ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ಬಹುತೇಕ ಜನರು ನೈಸರ್ಗಿಕ ನೀರಿನ್ನು ಅವಲಂಬಿಸಿದ್ದು, ಈ ಬಾರಿ ಮಳೆ ಬಾರದ ಕಾರಣ ನೀರು ಬತ್ತಿಹೋಗುತ್ತಿದೆ.

ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಇನ್ನೂ ಪೂರ್ಣವಾಗದ ಕಾರಣ ಗ್ರಾಮೀಣ ಪ್ರದೇಶದ ಜನತೆ ನೀರಿನ ಅಭಾವ ಎದುರಿಸುವ ಸಾಧ್ಯತೆ ಇದೆ.