ನಾಪೋಕ್ಲು, ಏ. ೭: ಕೊಡವ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಯಾಗಿದೆ. ಹಾಕಿ ಉತ್ಸವದಲ್ಲಿ ಇದೇ ಪ್ರಪ್ರಥಮ ಬಾರಿಗೆ ಕುಪ್ಪಂಡ (ಕೈಕೇರಿ) ಕುಟುಂಬ ಫೈನಲ್ ಪ್ರವೇಶಿಸಿದ್ದರೆ, ೧೯೯೮, ೧೯೯೯ ಹಾಗೂ ೨೦೦೨ ರಲ್ಲಿ ಚಾಂಪಿಯನ್ ಆಗಿದ್ದ ಕುಲ್ಲೇಟಿರ ಕುಟುಂಬ ಇದೀಗ ೧೬ ವರ್ಷಗಳ ಅಂತರದ ಬಳಿಕ ಮತ್ತೊಮ್ಮೆ ಪ್ರಶಸ್ತಿ ಗಳಿಸುವತ್ತ ಹೆಜ್ಜೆ ಹಾಕಿದೆ. ಇಂದು ನಡೆ ರೋಚಕ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ನೆಲ್ಲಮಕ್ಕಡ ಹಾಗೂ ಪಳಂಗAಡ ತಂಡಗಳು ಪರಾಭವಗೊಂಡವು.
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ರೋಚಕ ಹೋರಾಟದಿಂದ ಕೂಡಿದ್ದು, ಹಾಕಿ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
ಕುಲ್ಲೇಟಿರ ಮತ್ತು ನೆಲ್ಲಮಕ್ಕಡ ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್ಸ್ ಪಂದ್ಯವನ್ನು ಮಾಜಿ ಒಲಂಪಿಯನ್ ಮನೆಯಪಂಡ ಎಂ.ಸೋಮಯ್ಯ ಹಾಗೂ ಅಂತರರಾಷ್ಟಿçÃಯ ಹಾಕಿ ಆಟಗಾರ ಬೊವ್ವೇರಿಯಂಡ ಕುಟ್ಟಪ್ಪ ಉದ್ಘಾಟಿಸಿದರು. ಈ ಪಂದ್ಯದಲ್ಲಿ ಕುಲ್ಲೇಟಿರ ತಂಡವು ನೆಲ್ಲಮಕ್ಕಡ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿ ಫೈನಲ್ಸ್ ತಲುಪಿತ್ತು. ಮೊದಲಿಗೆ ಕುಲ್ಲೇಟಿರ ಯಾಶಿಕ್ ಮತ್ತು ನೆಲ್ಲಮಕ್ಕಡ ಮೊಣ್ಣಪ್ಪ ಅವರ ಗಳಿಸಿದ ಗೋಲುಗಳಿಂದ ಎರಡೂ ತಂಡಗಳು ೧-೧ ಗೋಲಿನ ಸಮಬಲದೊಂದಿಗೆ ಮುನ್ನಡೆದವು. ನಂತರ ನಡೆದ ಶೂಟ್‌ಔಟ್‌ನಲ್ಲಿ ನೆಲ್ಲಮಕ್ಕಡ ತಂಡದ ಪರ ಆಶಿಕ್ ಮತ್ತು ಪೂವಣ್ಣ ತಲಾ ಒಂದೊAದು ಗೋಲು ದಾಖಲಿಸಿದರೆ, ಕುಲ್ಲೇಟಿರ ತಂಡದ ಪರ ನಾಚಪ್ಪ, ಯತಿನ್ ಮತ್ತು ಶುಭಂ ಚಿಟ್ಟಿಯಪ್ಪ ತಲಾ ಒಂದೊAದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.ಕುಪ್ಪಂಡ(ಕೈಕೇರಿ) ಮತ್ತು ಪಳಂಗAಡ ತಂಡಗಳ ನಡುವೆ ನಡೆದ ಎರಡನೆಯ ಸೆಮಿಫೈನಲ್ಸ್ ಪಂದ್ಯವನ್ನು ಅಂತರಾಷ್ಟಿçÃಯ ಹಾಕಿ ತೀರ್ಪುಗಾರರಾದ ಅಚ್ಚಕಾಳೆರ ಪಳಂಗಪ್ಪ ಮತ್ತು ಅಯ್ಯುಡ ವೇಣು ಉತ್ತಪ್ಪ ಉದ್ಘಾಟಿಸಿದರು. ಈ ಸೆಣಸಾಟದಲ್ಲಿ ಕುಪ್ಪಂಡ ತಂಡವು ಪಳಂಗAಡ ತಂಡವನ್ನು ೪-೨ ಗೋಲುಗಳ ಅಂತರದಿAದ ಪರಾಭವಗೊಳಿಸಿ ಫೈನಲ್ಸ್ ಪ್ರವೇಶಿಸಿತು. ಮೊದಲಿಗೆ ಎರಡೂ ತಂಡಗಳು ಯಾವುದೇ ಗೋಲು ದಾಖಲಿಸದ ಹಿನ್ನೆಲೆಯಲ್ಲಿ ಶೂಟ್‌ಔಟ್ ಸುತ್ತು ನಡೆಸಲಾಯಿತು. ಈ ಸುತ್ತಿನಲ್ಲಿ ಪಳಂಗAಡ ತಂಡದ ಪರ ಅಜಯ್ ಮತ್ತು ಪ್ರಜ್ವಲ್ ತಲಾ ಒಂದೊAದು ಗೋಲು ದಾಖಲಿಸಿದರೆ, ಕುಪ್ಪಂಡ ತಂಡದ ಪರ ಸೋಮಯ್ಯ, ಜಗತ್, ನಾಚಪ್ಪ, ಮಂದಣ್ಣ ತಲಾ ಒಂದೊAದು ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು. ಸೆಮಿಫೈನಲ್ಸ್ ಪಂದ್ಯಾಟಕ್ಕೆ ಮುನ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಪೂಮಾಲೆ ಕೊಡವ ವಾರಪತ್ರಿಕೆಯ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಯ್ಯ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮೋಬಿಸ್ ಫೌಂಡೇಶನ್‌ನ ಮಣವಟ್ಟಿರ ಮಧು ಬೋಪಣ್ಣ, ಆದಿತ್ಯ ಹುಂಡೈ ಸಂಸ್ಥೆಯ ಎಂಡಿ ಸುಬ್ರಮಣ್ಯ ಗುಪ್ತ ಮತ್ತಿತರರು ಇದ್ದರು. ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತಿಸಿದರು. ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಮೂಡೆರ ಹರೀಶ್ ಕಾಳಯ್ಯ ಕಾರ್ಯನಿರ್ವಹಿಸಿದರು.
-ಪಿ.ವಿ. ಪ್ರಭಾಕರ್