ಪಾಲಿಬೆಟ್ಟ, ಏ. ೭: ಹಸುವೊಂದನ್ನು ಪಾಲಿಬೆಟ್ಟದ ಸಮಾಜ ಸೇವಕ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಗೋಶಾಲೆಗೆ ದಾನ ಮಾಡಿದರು.

ವೀರಾಜಪೇಟೆ ತಾಲೂಕಿನ ತೋರ ಗ್ರಾಮದ ಕಾವೇರಿ ಗೋಶಾಲೆಗೆ ಒಂದು ಗೋವನ್ನು ಹಸ್ತಾಂತರ ಮಾಡಿದರು.

ವಿಜು ಸುಬ್ರಮಣಿ ಪತ್ರಿಕೆಯೊಂದಿಗೆ ಮಾತನಾಡಿ, ಕರು ದೊಡ್ಡದಾದ ನಂತರ ಸಾಕುವವರಿಗೆ ಉದಾರವಾಗಿ ನೀಡಲಾಗುತ್ತಿದೆ. ಇದುವರೆಗೂ ೬ ಗೋವುಗಳನ್ನು ಮಠ ಹಾಗೂ ಗೋಶಾಲೆಗಳಿಗೆ ನೀಡಲಾಗಿದೆ ಎಂದರು.