ಮಡಿಕೇರಿ, ಏ. ೭: ಕ್ರೆöÊಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು ಕೊಡಗು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಆಚರಿಸಲಾಯಿತು.
ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಶುಭಶುಕ್ರವಾರ ಅಂಗವಾಗಿ ಯೇಸುವಿನ ಶಿಲುಬೆಯ ಹಾದಿಯ ಧ್ಯಾನ ಮಾಡಲಾಯಿತು. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಯೇಸು ಶಿಲುಬೆಯಲ್ಲಿ ಪ್ರಾಣತ್ಯಾಗ ಮಾಡಿದ ದಿನವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಅಂತೆಯೇ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗುಡ್ಪ್ರೈಡೆ ಆಚರಿಸಲಾಯಿತು.
ಮಡಿಕೇರಿಯ ಸಂತ ಮೈಕಲರ ದೇವಾಲಯದಲ್ಲಿ ಈ ಪ್ರಯುಕ್ತ ವಿಶೇಷ ದ್ಯಾನ, ಪ್ರಾರ್ಥನೆ ನಡೆಯಿತು. ಸಂಜೆ ಶಿಲುಬೆಯ ಹಾದಿ ನಡೆಯಿತು. ಧರ್ಮಗುರುಗಳಾದ ಫಾ. ದೀಪಕ್, ಫಾ. ನವೀನ್, ಫಾ. ರೇಗನ್ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಯೇಸು ಸ್ವಾಮಿ ಅನುಭವಿಸಿದ ಕಷ್ಟಗಳ ಸ್ಮರಣೆಯು ನಮಗೆ ನಮ್ಮ ಸಂಕಷ್ಟಗಳನ್ನು ಸಹಿಸಲು ಹಾಗೂ ದ್ವೇಷ ಅಸೂಯೆಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲು ಸ್ಪೂರ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಸೋಮವಾರಪೇಟೆ: ತಾಲೂಕಿನ ಗೋಪಾಲಪುರ ಚರ್ಚಿನಲ್ಲಿ ಗುಡ್ ಫ್ರೆöÊಡೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂತ ಅಂತೋಣಿ ಚರ್ಚಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಚರ್ಚ್ನ ಹಿಂಭಾಗವಿರುವ ಶಿಲುಬೆಟ್ಟದಲ್ಲಿ ೧೫ ಶಿಲುಬೆಯ ಪ್ರಾರ್ಥನೆ ನೆರವೇರಿಸಲಾಯಿತು.
ಈ ಸಂದರ್ಭ ಫಾದರ್ ಜೇಕಬ್ ಕೊಲ್ಲನೂರು ಅವರು ದೇವರ ಸಂದೇಶವನ್ನು ಭಕ್ತಾದಿಗಳಿಗೆ ಬೋಧಿಸಿ, ಯೇಸುವಿನ ಪ್ರೀತಿ -ತ್ಯಾಗದ ಸಂಕೇತವಾಗಿ ಗುಡ್ಫ್ರೆöÊಡೆಯನ್ನು ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಗೋಪಾಲಪುರ, ಶನಿವಾರಸಂತೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕ್ರಿಶ್ಚಿಯನ್ ಸಮುದಾಯದವರು ಭಾಗಿಯಾಗಿದ್ದರು.
ಸುಂಟಿಕೊಪ್ಪದಲ್ಲಿ
ಸುAಟಿಕೊಪ್ಪ: ಗುಡ್ಫ್ರೆöÊಡೆ ಅಂಗವಾಗಿ ವಿಶೇಷ ಬಲಿಪೂಜೆಯನ್ನು ಸಂತ ಮೇರಿ ಶಾಲಾವರಣದಲ್ಲಿ ಪ್ರಾರ್ಥನಾ ಕೂಟವನ್ನು ಮೈಸೂರು ಧರ್ಮಕೇತ್ರದ ಜೇಮ್ಸ್ ಡೊಮಿನಿಕ್ ಹಾಗೂ ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೆಲ್ವಕುಮಾರ್ ಅವರುಗಳು ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೆöÊಸ್ತ ಭಾಂದವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿ ದ್ದರು.
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭಶುಕ್ರವಾರ ಅಂಗವಾಗಿ ಕ್ರೆöÊಸ್ತ ಭಾಂದವರು ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆ ಮಾಡುವ ಪ್ರಾರ್ಥನಕೂಟದಲ್ಲಿ ಪ್ರಸುತ್ತಪಡಿಸುವ ಮೂಲಕ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ದೇವಾಲಯ ದಲ್ಲಿ ಶುಭಶುಕ್ರವಾರದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳು ನೇರವೇರಿತು. ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭಶುಕ್ರವಾರ ಅಂಗವಾಗಿ ಕ್ರೆöÊಸ್ತ ಭಾಂದವರು ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆ ಮಾಡುವ ಪ್ರಾರ್ಥನಕೂಟದಲ್ಲಿ ಪ್ರಸುತ್ತಪಡಿಸುವ ಮೂಲಕ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ದೇವಾಲಯ ದಲ್ಲಿ ಶುಭಶುಕ್ರವಾರದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳು ನೇರವೇರಿತು. ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಸಿದ್ದಾಪುರ: ಶುಭ ಶುಕ್ರವಾರದ ಅಂಗವಾಗಿ ಕ್ರೆöÊಸ್ತ ಬಾಂಧವರು ಶುಕ್ರವಾರದಂದು ಪ್ರಾರ್ಥನೆ ಹಾಗೂ ಆರಾಧನೆಯ ಮೂಲಕ ನೆಲ್ಯಹುದಿಕೇರಿಯಿಂದ ಸಿದ್ದಾಪುರದವರೆಗೆ ಶಿಲುಬೆಗಳನ್ನು ಹಿಡಿದುಕೊಂಡು ಮೆರವಣಿಗೆ ಮೂಲಕ ತೆರಳಿದರು. ನೆಲ್ಯಹುದಿಕೇರಿ ಪಟ್ಟಣದಿಂದ ಸಿದ್ದಾಪುರದ ಸಂತ ಮೇರಿ ಚರ್ಚಿನವರೆಗೆ ನೂರಾರು ಕ್ರೆöÊಸ್ತ ಬಾಂಧವರು ಪ್ರಾರ್ಥನೆ ಮೂಲಕ ಯೇಸು ಕ್ರಿಸ್ತನನ್ನು ಭಕ್ತಿಯಿಂದ ಸ್ಮರಿಸಿದರು. ನಂತರ ಚರ್ಚ್ನಲ್ಲಿ ಆರಾಧನೆ ಪೂಜೆ ವಿಶೇಷ ಪ್ರಾರ್ಥನೆಗಳು ನಡೆಯಿತು.
ಚೆಟ್ಟಳ್ಳಿ: ಚೆಟ್ಟಳ್ಳಿಯ ಸೆಂಟ್ ಸಬಾಸ್ಟಿನ್ ಚರ್ಚ್ನಲ್ಲಿ ಗುಡ್ಫ್ರೆöÊಡೆ ಆಚರಿಸಲಾಯಿತು. ಒಂಟಿಅAಗಡಿಯಿAದ ಪ್ರಾರ್ಥನೆ ಮುಖಾಂತರ ಕ್ರಿಶ್ಚಿಯನ್ ಬಾಂಧವರು ಶಿಲುಬೆಯನ್ನಿಡಿದು ಮೌನ ಮೆರವಣಿಗೆಯ ಮೂಲಕ ಚೆಟ್ಟಳ್ಳಿಯ ಚರ್ಚ್ ತನಕ ಫಾದರ್ ಜೆರಾಳ್ದ್ ಸೆಕ್ವೇರ ನೇತೃತ್ವದಲ್ಲಿ ಆಗಮಿಸಿದರು ಬಲಿಪೂಜೆ ನಡೆಯಿತು.
ಸೋಮವಾರಪೇಟೆ: ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಗುಡ್ ಫ್ರೆöÊಡೆಯನ್ನು ಸೋಮವಾರಪೇಟೆಯಲ್ಲಿ ಅರ್ಥಪೂರ್ಣವಾಗಿ ಆಚರಿಸ Àಲಾಯಿತು. ದಿನದ ಅಂಗವಾಗಿ ಪಟ್ಟಣದಲ್ಲಿ ಶಿಲುಬೆ ಮೆರವಣಿಗೆ ನಡೆಯಿತು. ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆದ ಏಸು ಕ್ರಿಸ್ತರ ಜನ್ಮ ವೃತ್ತಾಂತವನ್ನು ಬಿಂಬಿಸುವ ರೂಪಕ ಗಮನ ಸೆಳೆಯಿತು. ಸ್ಥಳೀಯ ಕ್ರಿಶ್ಚಿಯನ್ ಸಮುದಾಯದ ಯುವ ಸಮೂಹದಿಂದ ಮೂಡಿಬಂದ ರೂಪಕ ಮನೋಜ್ಞವಾಗಿತ್ತು. ನಂತರ ಜಯವೀರಮಾತೆ ದೇವಾಲಯದಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ನೆರವೇರಿತು. ಧರ್ಮಗುರು ರಾಯಪ್ಪ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಜಯವೀರಮಾತೆ ದೇವಾಲಯದ ಸಲಹಾ ಸಮಿತಿ ಕಾರ್ಯದರ್ಶಿ ಶೀಲಾ ಡಿಸೋಜ, ಪದಾಧಿಕಾರಿಗಳಾದ ಮಾರ್ಷಲ್ ಲೋಬೋ, ವಿ.ಎ. ಲಾರೆನ್ಸ್, ಪ್ರಿನ್ಸ್, ವಿನ್ಸಿ, ಮರ್ವಿನ್ ಫರ್ನಾಂಡೀಸ್, ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮೀಪದ ಅಬ್ಬೂರುಕಟ್ಟೆಯ ಚರ್ಚ್ನಲ್ಲಿಯೂ ಗುಡ್ಫ್ರೆöÊಡೆ ಆಚರಣೆ ನಡೆಯಿತು. ಧರ್ಮಗುರು ಡಿಕುನ್ನಾ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು.