ಸೋಮವಾರಪೇಟೆ, ಏ. ೫: ಸಮೀಪದ ಬಜೆಗುಂಡಿ ಗ್ರಾಮದ ಶ್ರೀ ಕರಿಮಾರಿಯಮ್ಮ ದೇವಾಲಯದ ೨೮ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಾಲಯದಲ್ಲಿ ನವಕ ಪ್ರಧಾನ ಕಲಾಕಲಶ ಪ್ರತಿಷ್ಠೆ, ಶ್ರೀ ಕರಿಮಾರಿಯಮ್ಮ ದೇವರಿಗೆ ಕಲಾತತ್ವಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆ ನಡೆಯಿತು. ಭಕ್ತಾದಿಗಳಾದ ಮಣಿ, ಮಣಿಕಂಠ ಮತ್ತು ಸಂದೀಪ ಅವರುಗಳು ಕರಗವನ್ನು ಹೊತ್ತು ದೇವಿಗೆ ಸೇವೆ ಸಲ್ಲಿಸಿದರು.
ಮಾರನೇ ದಿನ ಬೆಳಗ್ಗೆ ದೇವಿಗೆ ಅಲಂಕಾರ, ಪೂಜೆ ನಂತರ ಮಹಾಮಂಗಳಾರತಿ, ಸಾರ್ವಜನಿಕ ಭಕ್ತಾದಿಗಳಿಗೆ ಶ್ರೀದೇವರ ಪ್ರಸಾದ ವಿತರಣೆ ನಡೆಯಿತು.