ಕೂಡಿಗೆ, ಏ. ೫: ಕುಶಾಲನಗರ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜು ಇವರ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಚಿತ್ವ, ಗ್ರಾಮದ ಮುಖ್ಯ ರಸ್ತೆಯ ಬದಿ, ಮತ್ತು ಶಾಲಾ ಆವರಣದಲ್ಲಿ ಶಿಬಿರಾರ್ಥಿಗಳಿಂದ ಶ್ರಮದಾನದ ಮೂಲಕ ಶುಚಿತ್ವವನ್ನು ನಡೆಸಲಾಯಿತು.

ಈ ಸಂದರ್ಭ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತ, ಶಿಬಿರಾಧಿಕಾರಿ ಮಜೇಶ್, ದಿನೇಶ್ ಕುಮಾರ್, ಬಿಂದು, ಮುಮ್ತಾಜ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.