ಶನಿವಾರಸಂತೆ, ಏ. ೫: ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಿಗನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಪೂಜಾ ಮಹೋತ್ಸವ ತಾ. ೬ ಮತ್ತು ೭ ರಂದು ನಡೆಯಲಿದೆ.
ತಾ. ೬ ರಂದು ರಾತ್ರಿ ೮ ಗಂಟೆಯಿAದ ೧೦ ಗಂಟೆಯವರೆಗೆ ದೇವಿ ಸಾನಿಧ್ಯದಲ್ಲಿ ಹೋಮ, ಹವನ, ಮಹಾಮಂಗಳಾರತಿ, ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗವಿರುತ್ತದೆ.
ತಾ. ೭ರಂದು ಬೆಳಿಗ್ಗೆ ೪ ಗಂಟೆಯಿAದ ಗಂಗಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ, ಅರ್ಚನೆ ಮುಗಿದ ನಂತರ ೮ ಗಂಟೆಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಕೀಲುಕುದುರೆ ಕುಣಿತ, ವೀರಗಾಸೆ, ಕುಣಿತ, ನಗಾರಿ ವಾದ್ಯ ಹಾಗೂ ಕಳಶ ಸಹಿತ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು.
ಮಧ್ಯಾಹ್ನ ೧೨ ರಿಂದ ದೇವಿ ಸಾನಿಧ್ಯದಲ್ಲಿ ಮಡ್ಲಕ್ಕಿ ಅರ್ಪಣಾ ಹಾಗೂ ಹಣ್ಣುಕಾಯಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೪ ರಿಂದ ಕೆಂಡೋತ್ಸವ ಕಾರ್ಯಕ್ರಮ ನಂತರ ೬ ರಿಂದ ಮಹಾ ಮಂಗಳಾರತಿ, ದೀಪೋತ್ಸವ ಹಾಗೂ ಪ್ರಸಾದ ವಿನಿಯೋಗವಿರುತ್ತದೆ.
ರಾತ್ರಿ ೮ ಗಂಟೆಗೆ ಕೋಣಿಗನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷಿö್ಮÃ ಶನಿದೇವರ ಪಂಥ ಅಥವಾ ಹರಿಭಕ್ತ ಮಹಾಭಾರತ ಎಂಬ ಪೌರಾಣಿಕ ನಾಟಕವಿರುತ್ತದೆ ಎಂದು ದೇವಸ್ಥಾನ ಸಮಿತಿ ವ್ಯವಸ್ಥಾಪಕ ಕೆ.ಪಿ. ಗುರುವಪ್ಪ, ಸುಶೀಲ, ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.