ನಾಪೋಕ್ಲು, ಏ. ೪: ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವದಲ್ಲಿ ಕಂಬೀರAಡ ತಂಡ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಸಾಧನೆ ತೋರಿದೆ. ಇದರೊಂದಿಗೆ ಕುಲ್ಲೇಟಿರ, ಪುದಿಯೊಕ್ಕಡ ಹಾಗೂ ನೆಲ್ಲಮಕ್ಕಡ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಇಂದು ಮೊದಲ ಪ್ರಿಕ್ವಾರ್ಟರ್ ಫೈನಲ್ ಪಂದ್ಯಾಟ ಜರುಗಿತು.
೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕೊನೆಯ ಸುತ್ತಿನ ಪ್ರೀ ಕ್ವಾರ್ಟರ್ ಫೈನಲ್ಸ್ ಇಂದು (ಏ. ೫ರಂದು) ನಡೆಯಲಿದ್ದು, ೮ ತಂಡಗಳು ಸೆಣಸಾಡಲಿವೆ.
ಮಂಗಳವಾರದ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು ಚೌರೀರ (ಹೊದ್ದೂರು) ತಂಡವನ್ನು ೩-೨ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಚೌರೀರ ತಂಡದ ಪರ ಹರ್ಷ ಮತ್ತು ಪೊನ್ನಣ್ಣ ತಲಾ ಒಂದೊAದು ಗೋಲು ದಾಖಲಿಸಿದರೆ, ಪುದಿಯೊಕ್ಕಡ ತಂಡದ ಪರ ಸೂರಜ್ ಬೋಪಣ್ಣ, ಪ್ರಧಾನ್ ಸೋಮಣ್ಣ ಮತ್ತು ವಿಪನ್ ಸೋಮಣ್ಣ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಲ್ಲೇಟಿರ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಪೆಮ್ಮಂಡ ತಂಡವನ್ನು ೪-೨ ಗೋಲಿನ ಅಂತರದಿAದ ಪರಾಭವಗೊಳಿಸಿತು.
ಪೆಮ್ಮಂಡ ತಂಡದ ಪರ ಸೋಮಣ್ಣ ಪಿ.ಎ ಮತ್ತು ಸೋಮಣ್ಣ ಪಿ.ಯು ತಲಾ ಒಂದೊAದು ಗೋಲು ದಾಖಲಿಸಿದರೆ, ಕುಲ್ಲೇಟಿರ ತಂಡದ ಪರ ಯಾಶಿಕ್ ಮುತ್ತಣ್ಣ ಎರಡು, ಅವನಿಶ್ ಮಾದಪ್ಪ ಮತ್ತು ಅರ್ಜುನ್ ಸೋಮಣ್ಣ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕಂಬೀರAಡ ಮತ್ತು ಮುಕ್ಕಾಟಿರ(ಪುಲಿಕೋಟು) ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕಂಬೀರAಡ ತಂಡವು ಮುಕ್ಕಾಟಿರ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಮುಕ್ಕಾಟಿರ ತಂಡದ ಪರ ಪೂಣಚ್ಚ ಒಂದು ಗೋಲು ದಾಖಲಿಸಿದರೆ, ಕಂಬೀರAಡ ತಂಡದ ಪರ ಬೋಪಣ್ಣ ಮತ್ತು ಮಯೂರ್ ತಲಾ ಒಂದೊAದು ಗೋಲು ದಾಖಲಿಸಿದರು.
ನೆಲ್ಲಮಕ್ಕಡ ಮತ್ತು ಬೊವ್ವೇರಿಯಂಡ ತಂಡದ ನಡುವೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಬೊವ್ವೇರಿಯಂಡ ತಂಡವನ್ನು ೮-೦ ಗೋಲುಗಳ ಅಂತರದಿAದ ಸೋಲಿಸಿ ಕ್ವಾರ್ಟರ್ ಫೈನಲ್ಸ್ಗೆ ಲಗ್ಗೆ ಇಟ್ಟಿದೆ. ನೆಲ್ಲಮಕ್ಕಡ ತಂಡದ ಪರ ಸೋಮಯ್ಯ ೩ ಗೋಲು ದಾಖಲಿಸಿದರೆ, ಆಕಾಶ್, ಅಯ್ಯಪ್ಪ, ಪೂವಣ್ಣ, ಮುತ್ತಪ್ಪ, ಮೊಣ್ಣಪ್ಪ ತಲಾ ಒಂದೊAದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.
-ಪಿ.ವಿ.ಪ್ರಭಾಕರ್ ಅಂತರರಾಷ್ಟಿçÃಯ ಹಾಕಿ ಆಟಗಾರ್ತಿ, ಏಕಲವ್ಯ ಪ್ರಶಸ್ತಿ ಪಡೆದ ಕಂಬೀರAಡ ಪೊನ್ನಮ್ಮ ತಮ್ಮ ಪತಿ ಕಂಬೀರAಡ ಬೋಪಣ್ಣ ಅವರೊಂದಿಗೆ ಆಟವಾಡಿದ್ದು ವಿಶೇಷವಾಗಿತ್ತು.