(ಅಣ್ಣೀರ ಹರೀಶ್ ಮಾದಪ್ಪ)

ಶ್ರೀಮಂಗಲ, ಏ. ೪: ಕಳೆದ ೩ ದಿನಗಳಿಂದ ಟಿ. ಶೆಟ್ಟಿಗೇರಿಯಲ್ಲಿ ಹಬ್ಬದ ಸಂಭ್ರಮ ಸಡಗರ ಮೂಡಿಸಿ ದಾಖಲೆಯ ಕ್ರೀಡಾಭಿಮಾನಿಗಳನ್ನು ಆಕರ್ಷಿಸಿದ್ದ ಚೆಟ್ಟಂಗಡ ಕುಟುಂಬ ಆಶ್ರಯದಲ್ಲಿ ನಡೆದ ಕೊಡವ ಕೌಟುಂಬಿಕ ಕೇರ್‌ಬಲಿ ನಮ್ಮೆಗೆ (ಹಗ್ಗ ಜಗ್ಗಾಟ) ಮಂಗಳವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿತು.

ಟಿ. ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಮಾಳೇಟಿರ (ಕುಕ್ಲೂರು) ತಂಡ ವಿನ್ನರ್ಸ್ ಪ್ರಶಸ್ತಿಯೊಂದಿಗೆ ರೂ. ೫೦ ಸಾವಿರ ನಗದು, ಮಹಿಳೆಯರ ವಿಭಾಗದಲ್ಲಿ ಅಣ್ಣಳಮಾಡ ತಂಡ ವಿನ್ನರ್ಸ್ ಪ್ರಶಸ್ತಿಯೊಂದಿಗೆ ರೂ. ೫೦ ಸಾವಿರ ನಗದನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ರನ್ನರ್ಸ್ ಪ್ರಶಸ್ತಿ ಹಾಗೂ ತಲಾ ರೂ. ೩೦ ಸಾವಿರ ನಗದನ್ನು ಪುರುಷರ ವಿಭಾಗದಲ್ಲಿ ಮಾಳೇಟಿರ (ಕೆದಮುಳ್ಳೂರು) ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಅಜ್ಜಮಾಡ ತಂಡ ಪ್ರಶಸ್ತಿ ಪಡೆಯಿತು.

ಮೂರನೇ ಸ್ಥಾನವನ್ನು ಪುರುಷರ ವಿಭಾಗದಲ್ಲಿ ಚಂಗುಲAಡ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಕಾಂಡAಡ ತಂಡ ತಲಾ ರೂ.೨೦ ಸಾವಿರ ನಗದು ಮತ್ತು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪAದ್ಯಾವಳಿಯಲ್ಲಿ ೧೦೨ ಪುರುಷರ ಮತ್ತು ೭೫ ಮಹಿಳೆಯರ ತಂಡ ಭಾಗವಹಿಸಿದ್ದವು. ಅಂತಿಮವಾಗಿ ಸೆಮಿಫೈನಲ್‌ಗೆ ಪುರುಷರ ವಿಭಾಗದಲ್ಲಿ ಚಂಗುಲAಡ-ಮಾಳೇಟಿರ (ಕೆದಮುಳ್ಳೂರು) ಮತ್ತು ಮಾಳೇಟಿರ (ಕುಕ್ಲೂರು)-ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ (ಕುಕ್ಲೂರು) - ಮಾಳೇಟಿರ (ಕೆದಮುಳ್ಳೂರು) ತಂಡಗಳು ಗೆಲುವು ಸಾಧಿಸಿ ಫೈನಲ್‌ಗೇರಿದವು.

ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಅಣ್ಣಳಮಾಡ-ಕಡೇಮಾಡ ಮತ್ತು ಕಾಂಡAಡ-ಅಜ್ಜಮಾಡ ತಂಡಗಳ ಪಂದ್ಯದಲ್ಲಿ ಅಣ್ಣಳಮಾಡ-ಅಜ್ಜಮಾಡ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಹೈಕೋರ್ಟ್ ವಕೀಲ, ರಾಜ್ಯ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಪಾಲ್ಗೊಂಡಿದ್ದರು.

ಮಾಜಿ ಒಲಂಪಿಯನ್ ನಿವೃತ್ತ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ

(ಮೊದಲ ಪುಟದಿಂದ) ಪಂದ್ಯಾವಳಿಯನ್ನು ಯಶಸ್ವಿಯಾಗಿ ಅಯೋಜಿಸಿರುವುದಕ್ಕೆ ಚೆಟ್ಟಂಗಡ ಕುಟುಂಬವನ್ನು ಶ್ಲಾಘಿಸಿದರು. ಸಾಹಸ ಕ್ರೀಡೆಯಾಗಿರುವ ಹಗ್ಗಜಗ್ಗಾಟ ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ,ಕ್ರೀಡೆಗೆ ಕೊಡವ ಕುಟುಂಬಗಳು ಉತ್ತೇಜನ ನೀಡುತ್ತಿದ್ದು, ಮುಂದೆಯೂ ಯಶಸ್ವಿಯಾಗಿ ಕ್ರೀಡಾಕೂಟ ನಡೆಯಲಿ ಎಂದರು.

ತಾವಳಗೇರಿ ಮೂಂದ್ ನಾಡ್ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಹಾಕಿ, ಕ್ರಿಕೆಟ್ ಮತ್ತು ಈಗ ಹಗ್ಗಜಗ್ಗಾಟ ಕ್ರೀಡೆಯಿಂದ ಚದುರಿ ಹೋಗಿರುವ ಕೊಡವ ಕುಟುಂಬಗಳು ಒಂದೆಡೆ ಸೇರಲು ಅವಕಾಶವಾಗಿದೆ. ಗ್ರಾಮೀಣ ಕ್ರೀಡೆಯಾದ ಕೊಕೊ ಮತ್ತು ಕಬಡ್ಡಿಗೂ ಮುಂದಿನ ದಿನಗಳಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಉತ್ತೇಜನ ದೊರೆಯುವಂತಾಗಲಿ ಎಂದರು.

ಅಕಾಡೆಮಿ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಪೊನ್ನೋಲತಂಡ ಭವ್ಯ ಪೊನ್ನಪ್ಪ, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಚೊಟ್ಟೆಯಾಂಡಮಾಡ ಸರಿತಾ ತಮ್ಮಯ್ಯ, ಚೆಟ್ಟಂಗಡ ಕುಟುಂಬ ಅಧ್ಯಕ್ಷ ವಿಜಯ ಕಾರ್ಯಪ್ಪ, ಕುಟುಂಬದ ಹಿರಿಯರಾದ ಅರಸು ಅಚ್ಚಪ್ಪ, ವಿಠಲ ಬೋಪಣ್ಣ, ಡಾಲಿ, ಕಟ್ಟಿ ಮುಂದಿನ ವರ್ಷ ನಾಪೋಕ್ಲುವಿನಲ್ಲಿ ೩ನೇ ವರ್ಷದ ಹಗ್ಗಜಗ್ಗಾಟ ಪಂದ್ಯಾವಳಿ ಅಯೋಜಿಸುತ್ತಿರುವ ಬೊಟ್ಟೋಳಂಡ ಕುಟುಂಬದ ಗಣಪತಿ, ಮಿಟ್ಟು ಪೂಣಚ್ಚ, ರಮೇಶ್ ಸೋಮಯ್ಯ ಹಾಜರಿದ್ದರು. ವಿಜಯ ಕಾರ್ಯಪ್ಪ ಸ್ವಾಗತಿಸಿ, ಅಶ್ವಿನಿ ವಸಂತ್ ವಂದಿಸಿದರು.

ಚೆಟ್ಟAಗಡ ಕುಟುಂಬ ತಂಡದಿAದ ಸಾಂಸ್ಕೃತಿಕ ನೃತ್ಯ, ತಿಂಗಕೊರ್ ಮೊಟ್ಟ್ ತಲಕಾವೇರಿ ತಂಡದಿAದ ಪರೆಯಕಳಿ, ಮಹಿಳಾ ತಂಡದಿAದ ನೃತ್ಯ, ಚೆಟ್ಟಂಗಡ ಲೇಖನ ಅಕ್ಕಮ್ಮರಿಂದ ಭರತ ನಾಟ್ಯ ಗಮನ ಸೆಳೆಯಿತು. ಚೆಟ್ಟಂಗಡ ಕುಟುಂಬ ಕಾರ್ಯದರ್ಶಿ ರವಿ ಸುಬ್ಬಯ್ಯ ವೀಕ್ಷಕ ವಿವರಣೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.

ಅಂಪೈರ್ ಮತ್ತು ತಾಂತ್ರಿಕ ಸಮಿತಿಯಲ್ಲಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಆರ್ಯ ಪೊನ್ನಪ್ಪ, ಆಯುಷ್ ಪೊನ್ನಪ್ಪ, ಕೊಣಿಯಂಡ ಮಂಜು ಮಾದಯ್ಯ, ದೀಕ್ಷಿತ್ ಮಾದಯ್ಯ, ಮುಂಡಚಾಡೀರ ಭರತ್, ಚಂಗುಲAಡ ಸತೀಶ್, ಉಳುವಂಗಡ ಲೋಹಿತ್ ಭೀಮಯ್ಯ ನಿರ್ವಹಿಸಿದರು.

ಮುಂದಿನ ವರ್ಷ ಪಂದ್ಯಾವಳಿ ಅಯೋಜಿಸುತ್ತಿರುವ ಬೊಟ್ಟೋಳಂಡ ಕುಟುಂಬಕ್ಕೆ ಕೊಡವ ಹಗ್ಗ ಜಗ್ಗಾಟ ಅಕಾಡೆಮಿ ಮತ್ತು ಚೆಟ್ಟಂಗಡ ಕುಟುಂಬದ ವತಿಯಿಂದ ಧ್ವಜವನ್ನು ಹಸ್ತಾಂತರಿಸಲಾಯಿತು.